ವೀಕೆಂಡ್ ಕರ್ಫ್ಯೂನಲ್ಲಿ ಬಸ್ ಸಂಚಾರಕ್ಕೆ ಅನುಮತಿ
ಬೆಂಗಳೂರು: ಕೊರೊನಾ ಅಲೆ ತಡೆಯುವ ಸಲುವಾಗಿ ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ ಇಲ್ಲ. ಕೇವಲ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಸಂಚಾರ ಮಾಡಲಿದೆ ಎಂದು ಬಿಎಂಟಿಸಿ ಎಂಡಿ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ. ಜನರೇ ಇಲ್ಲದೆ ಬಸ್ ಸಂಚಾರ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿ ಬಸ್ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ ಜಾವ 5ರವರೆಗೆ ಬಿಎಂಟಿಸಿ ಸಂಚಾರ ನಿಲ್ಲಿಸಲಿದೆ. ಕೇವಲ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಕೋವಿಡ್ ಕರ್ತವ್ಯದಲಿರುವ ಸಿಬ್ಬಂದಿಗೆ ಮಾತ್ರ ಬಿಎಂಟಿಸಿ ಬಸ್ ಚಲಿಸಲಿವೆ.
ಆದ್ರೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ವೀಕೆಂಡ್ ಕರ್ಫ್ಯೂನಲ್ಲಿ ದೊರೆಯಲಿದೆ. ರಾಜ್ಯದಾದ್ಯಂತ ಶನಿವಾರ, ಭಾನುವಾರವೂ ಸಹ ಕೆಎಸ್‌ಆರ್ಟಿಸಿ ಬಸ್ ಸಂಚಾರ ನಡೆಸಲಿವೆ. ರಾಜ್ಯದಿಂದ ಹಒರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳಿಗೂ ಅನುಮತಿ ನೀಡಲಾಗಿದೆ ಎಂದು KSRTC MD ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ. ಬಸ್‌ನಲ್ಲಿ ಜನಜಂಗುಳಿ ಇರುವ ಹಾಗಿಲ್ಲ ೫೦ ಆಸನಕ್ಕೆ ಅವಕಾಶ ನೀಡಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದಿದ್ದಾರೆ.