HealthNational

ಕೇರಳದಲ್ಲಿ ಕೊವಿಡ್ ಸೋಂಕು ಹೆಚ್ಚಳ; ಅಯ್ಯಪ್ಪ ಭಕ್ತರಿಗೆ ಹರಡುವ ಭೀತಿ

ತಿರುವನಂತಪುರಂ; ಮತ್ತೆ ದೇಶದಲ್ಲಿ ಕೊರೊನಾ ಆತಂಕ ಹುಟ್ಟಿಸುತ್ತಿದೆ. ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿತ್ಯ ಸರಾಸರಿ 150 ಪ್ರಕರಣಗಳು ಪತ್ತೆಯಾಗುತ್ತಿವೆ. ಬುಧವಾರ ಒಂದೇ ದಿನ 230 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ತಿಂಗಳ ಹಿಂದೆ ದಿನಕ್ಕೆ 10-12 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ತಿಂಗಳಿಂದೀಚೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 949ಕ್ಕೆ ಏರಿಕೆಯಾಗಿದೆ.

ನಾನಾ ರಾಜ್ಯಗಳಿಂದ ಅಯ್ಯಪ್ಪ ಭಕ್ತರು ಶಬರಿ ಮಲೆಗೆ ಆಗಮಿಸುತ್ತಿದ್ದಾರೆ. ಶಬರಿಮಲೆಯಲ್ಲಿ‌ 80 ಸಾವಿರ ಭಕ್ತರು ತುಂಬಿದ್ದಾರೆ. ಹೀಗಾಗಿ ಕೋವಿಡ್ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

ಕಳೆದ ಎಂಟು ದಿನಗಳಲ್ಲಿ 825 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇನ್ನು ಈ ತಿಂಗಳಲ್ಲಿ ಕೋವಿಡ್ ಗೆ ಇಬ್ಬರು ಬಲಿಯಾಗಿದ್ದಾರೆ.

Share Post