Uncategorized

ಮಾಜಿ ಶಾಸಕನಿಗೆ ಚಪ್ಪಲಿ ತೋರಿಸಿದ ಕಾಂಗ್ರೆಸ್‌ ಶಾಸಕ

ಹಗರಿಬೊಮ್ಮನಹಳ್ಳಿ: ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಶಾಸಕರೊಬ್ಬರು, ಬಿಜೆಪಿ ಮಾಜಿ ಶಾಸಕರಿಗೆ ಚಪ್ಪಲಿ ತೋರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ಮತಗಟ್ಟೆಯೊಂದರ ಬಳಿ ಕಾಂಗ್ರೆಸ್‌ ಶಾಸಕ ಎಲ್‌.ಬಿ.ಪಿ. ಭೀಮನಾಯ್ಕ ಅವರು ಬಿಜೆಪಿ ಮಾಜಿ ಶಾಸಕ ನೇಮಿರಾಜ ನಾಯ್ಕಗೆ ಚಪ್ಪಲಿ ತೋರಿಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಹಗರಿ ಬೊಮ್ಮನಹಳ್ಳಿ ಪಟ್ಟಣದ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. 20 ಮತ್ತು 21ನೇ ಮತಗಟ್ಟೆಯ ಬಳಿ ಶಾಸಕ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆಯೇ ಶಾಸಕರು ಚಪ್ಪಲಿ ತೋರಿಸಿದ್ದು, ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಆ ದೃಶ್ಯ ಸೆರೆಯಾಗಿದೆ.

Share Post