Technology

ಹೊಸ ವರ್ಷಕ್ಕೆ ಬೆಂಗಳೂರಿಗೆ ಬರಲಿದೆ 5G

ನವದೆಹಲಿ: ಹೊಸ ವರ್ಷಕ್ಕೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದೂರ ಸಂಪರ್ಕ ಸೇವಾ ಕಂಪನಿಗಳು 5g ಸೇವೆ ಆರಂಭಿಸಲು ಸಿದ್ಧತೆ ನಡೆಸಿವೆ. ಬೆಂಗಳೂರು, ಮಯಂಬೈ, ಕೋಲ್ಕತ್ತಾ, ಹೈದರಾಬಾದ್‌ ಹಾಗೂ ಚೆನ್ನೈನಲ್ಲಿ 5G ಸೇವೆಗೆ ಪರೀಕ್ಷಾರ್ಥ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಮೊಬೈಲ್‌ ತಂತ್ರಜ್ಞಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ಏರ್‌ಟೆಲ್‌, ಜಿಯೊ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳು ದೇಶದಲ್ಲಿ 5G ಸೇವೆ ಆರಂಭಿಸಲು ತುದಿಗಾಲಲ್ಲಿ ನಿಂತಿವೆ. ಅದಕ್ಕಾಗಿ, ಪರೀಕ್ಷಾರ್ಥವಾಗಿ ಕೆಲವು ನಗರಗಳಲ್ಲಿ ಸೇವೆ ಒದಗಿಸಲು ಮುಂದಾಗಿವೆ.

Share Post