Technology

ವಾಟ್ಸಾಪ್‌ನಲ್ಲಿ ಹೊಸ ಫೀಚರ್‌ – ಗ್ರೂಪ್‌ನ ಯಾವುದೇ ಮೆಸ್ಸೇಜ್‌ ಬೇಕಿದ್ದರು ಅಡ್ಮಿನ್‌ ಅಳಿಸಿ ಹಾಕಬಹುದು

ನವದೆಹಲಿ : ಮೆಟಾ ಒಡೆತನದ ಜನಪ್ರಿಯ ಮೆಸ್ಸೆಜಿಂಗ್‌ ಆಪ್‌ ವಾಟ್ಸಾಪ್‌ನಲ್ಲಿ ಹೊಸ ಅಪ್ಡೇಟ್‌ಗಳು ಬರುತ್ತಲೇ ಇರುತ್ತವೇ. ಈಗ ಹೊಸ ಫೀಚರ್‌ ಅನ್ನು ವಾಟ್ಸಾಪ್‌ ಪರಿಚಯಿಸಲು ಮುಂದಾಗಿದೆ.

ಗ್ರೂಪ್‌ಗಳಲ್ಲಿ ಅನಗತ್ಯ ಮೆಸ್ಸೇಜ್‌ಗಳನ್ನು ನಿಯಂತ್ರಿಸಲು ಅಡ್ಮಿನ್‌ಗೆ ವಿಶೇಷ ಅವಕಾಶ ಕಲ್ಪಿಸಲಾಗ್ತಿದೆ. ಸದ್ಯ ಈಗ ವಾಟ್ಸಾಪ್‌ ಬೀಟಾ ಇನ್ಫೋ ಈ ಸುದ್ದಿಯ ಬಗ್ಗೆ ಟ್ವೀಟ್‌ ಮಾಡಿದೆ.

ಟ್ವೀಟ್‌ನಲ್ಲಿ ಏನಿದೆ,

ನೀವೇನಾದರೂ ಗ್ರೂಪ್‌ ಅಡ್ಮಿನ್‌ ಆಗಿದ್ದರೆ ನಿಮಗೆ ಗ್ರೂಪ್‌ನ ಎಲ್ಲಾ ಮೆಸ್ಸೇಜ್‌ಗಳ ಮೆಲೆಯೂ ನಿಯಂತ್ರಣ ಇರಲಿದೆ. ನೀವು ಬೇಕಿದ್ದಲ್ಲಿ ಆ ಮೆಸ್ಸೇಜ್‌ ಅನ್ನು ಡಿಲೀಟ್‌ ಮಾಡಬಹುದು.

ಗ್ರೂಪ್‌ನಲ್ಲಿ ಬರುವ ಮೆಸ್ಸೇಜ್‌ಗಳ ಮೇಲೆ ಸಂಪೂರ್ಣ ಹಿಡಿತ ಅಡ್ಮಿನ್‌ ಕೈಯಲ್ಲಿ ಇರುತ್ತದೆ. ನೀವು ಇಚ್ಛಿಸಿದರೆ ಮೆಸ್ಸೇಜ್‌ ಅನ್ನು ಉಳಿಸಿಕೊಳ್ಳಬಹುದು ಇಲ್ಲವಾದರೆ ಅದನ್ನು ಅಳಿಸಿ ಹಾಕಬಹುದು. ಸದ್ಯಕ್ಕೆ ಈ ಅಪ್ಡೇಟ್ ಆಂಡ್ರಾಯ್ಡ್‌ ಫೋನ್‌ಗಳಿಗೆ ಸಿಗಲಿದೆ ಎಂದು ಟ್ವೀಟ್‌ ಮಾಡಿದೆ.

Share Post