Cinema

ಅಪ್ಪು ಅವರ ಜೇಮ್ಸ್‌ಗೆ ಶಿವಣ್ಣನ ಧ್ವನಿ ಕನ್ಫರ್ಮ್

ಬೆಂಗಳೂರು : ಪುನೀತ್‌ ಅವರು  ನಮ್ಮನ್ನು ಅಗಲಿ ಮೂರು ಮಾಸಗಳಿ ಕಳೆದಿವೆ. ಮೊನ್ನೆಯಷ್ಟೇ ಕುಟುಂಬದವರೆಲ್ಲಾ ಅಪ್ಪು ಅವರ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದರು. ಈಗ ಜೇಮ್ಸ್‌ ಚಿತ್ರತಂಡದಿಂದ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

ಜೇಮ್ಸ್‌ ಚಿತ್ರ ಶೂಟಿಂಗ್‌ ಮುಗಿಸಿ ಕೆಲವು ದಿನಗಳ ಹಿಂದೆಯಷ್ಟೇ ಪುನೀತ್‌ ಅವರ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿತ್ತು. ಪೋಸ್ಟರ್‌ಗೆ ಫಿದಾ ಆಗಿರುವ ಅಭಿಮಾನಿಗಳು ಅಪ್ಪು ಅವರ ಕೊನೆ ಸಿನಿಮಾ ಇದಾಗಿದ್ದು ಇದಕ್ಕೆ ಶಿವಣ್ಣ ಧ್ವನಿ ನೀಡಿದರೆ ಅದ್ಭುತವಾಗಿರುತ್ತೆ ಎಂದು ಊಹಿಸಿದ್ದರು. ಈಗ ಚಿತ್ರತಂಡ ಇದನ್ನು ನಿಜ ಮಾಡಿದೆ.

ಶಿವಣ್ಣ ಇಂದಿನಿಂದ ಜೇಮ್ಸ್‌ ಸಿನಿಮಾದ ಡಬ್ಬಿಂಗ್‌ ಅಲ್ಲಿ ಭಾಗಿ ಆಗುತ್ತಿದ್ದಾರೆ. ಇದರಿಂದ ಅಪ್ಪು ಅವರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಲಿರುವುದು ಕನ್ಫರ್ಮ್‌ ಆಗಿದೆ. ಇನ್ನು ಎಲ್ಲವೂ ಲೆಕ್ಕಾಚಾರದ ಪ್ರಕಾರವೇ ನಡೆದರೆ ಸಿನಿಮಾ ಮಾರ್ಚ್‌ 17ಕ್ಕೆ ರಿಲೀಸ್‌ ಆಗೋದು ಕನ್ಫರ್ಮ್‌ . ಥಿಯೇಟರ್‌ಗೆ 100% ಪರ್ಮಿಷನ್‌ ಸರ್ಕಾರ ಕೊಡಬೇಕಿದೆ.

Share Post