ಚಂದ್ರಯಾನ-3; ನೆಹರೂ ತಾರಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ
ಬೆಂಗಳೂರು; ಇಂದು ಚಂದ್ರದ ನ ದಕ್ಷಿಣದ ಧ್ರುವದ ಮೇಲೆ ಚಂದ್ರಯಾನ-೩ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಅದಕ್ಕಾಗಿ ಇಡೀ ಪ್ರಪಂಚವೇ ಎದುರು ನೋಡುತ್ತಿದೆ. ಇಡೀ ಭಾರತದ ಜನ ಇದನ್ನು ಹೆಮ್ಮೆಯಿಂದ ವೀಕ್ಷಿಸಲು ರೆಡಿಯಾಗಿದ್ದಾರೆ. ಇನ್ನು ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವನಿಕರಿಗೂ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಸಾರ್ವಜನಿಕರಿಗೆ ನೆಹರೂ ತಾರಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ದೊಡ್ಡ LED ಸ್ಕ್ರೀನ್ನಲ್ಲಿ ಸಾಫ್ಟ್ ಲ್ಯಾಂಡಿಂಗ್ ಲೈವ್ ವೀಕ್ಷಿಸಬಹುದು. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಲೈವ್ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲಿಗೆ ಬೆಂಗಳೂರಿನ ಇಸ್ರೋ ಕಚೇರಿಗೆ ಮಾಹಿತಿ ಬರುತ್ತದೆ. ಬಳಿಕ ವಿಜ್ಞಾನಿಗಳು ಟ್ರ್ಯಾಕಿಂಗ್ ಸೆಂಟರ್ನಲ್ಲಿ ಮಾಹಿತಿ ಪಡೆಯುತ್ತಾರೆ. ಬಳಿಕ ನೆಹರು ತಾರಾಲಯದಲ್ಲಿ ಲೈವ್ ಆರಂಭವಾಗುತ್ತದೆ.