InternationalScienceTechnology

ಚಂದ್ರನಿಗೆ 153 ಕಿಮೀ ಕಕ್ಷೆಯಲ್ಲಿರುವ ಚಂದ್ರಯಾನ-3

ನವದೆಹಲಿ;  ಚಂದ್ರಯಾನ-೩ ಯಶಸ್ವಿಯಾಗುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ. ಚಂದ್ರನತ್ತ ಪ್ರಯಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಈಗ ಅದು ಚಂದ್ರನಿಗೆ ಸಾಕಷ್ಟು ಹತ್ತಿರವಾಗಿದೆ. ಇಂದು ಚಂದ್ರನ ಸುತ್ತ ಕಕ್ಷೆಯಲ್ಲಿ ಸುತ್ತಾಟ ನಡೆಸಿದೆ.

ಜುಲೈ 14, 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೨ ಪ್ರಾರಂಭವಾಗಿತ್ತು. ಇದು ಎರಡು ಭಾಗಗಳನ್ನು ಹೊಂದಿದ್ದು, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್. ವಿಕ್ರಮ್ ಹೆಸರಿನ ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 17  ಅಂದರೆ ನಾಳೆ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಲಿದೆ.

ಪ್ರೊಪಲ್ಷನ್ ಮಾಡ್ಯೂಲ್ ವಿಕ್ರಮ್ ಮತ್ತು ರೋವರ್ ಅನ್ನು ಚಂದ್ರನ ಕಡೆಗೆ ಸಾಗಿಸುತ್ತಿದೆ. ಬೇರ್ಪಟ್ಟ ನಂತರ, ಪ್ರೊಪಲ್ಷನ್ ಮಾಡ್ಯೂಲ್ ಸಂವಹನ ಉಪಗ್ರಹವಾಗಿ ಕಾರ್ಯನಿರ್ವಹಿಸುತ್ತದೆ.

ಚಂದ್ರಯಾನ-3 ಮಿಷನ್ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ಇದಕ್ಕೆ ಬಹುತೇಕ ಸೂಕ್ತ ವಾತಾವರಣ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಗಸ್ಟ್‌ 23ಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

 

Share Post