Districts

ರಾಣಿ ಅಹಿಲ್ಯಾಬಾಯಿಯನ್ನು ಮರೆತ ಮೋದಿ; ಎಚ್‌.ವಿಶ್ವನಾಥ್‌ ಆಕ್ರೋಶ

ಮೈಸೂರು: ಕಾಶಿಯಲ್ಲಿ ಇಂದು ವಿಶ್ವನಾಥ ಕಾರಿಡಾರ್  ಲೋಕಾರ್ಪಣೆಗೊಂಡಿದೆ. ಆದ್ರೆ, ವಿಶ್ವನಾಥ್‌ ದೇಗುಲವನ್ನು ಉಳಿಸಿದ ರಾಣಿ ಅಹಿಲ್ಯಾ ಬಾಯಿಯನ್ನೇ ಮರೆತಿದ್ದಾರೆ ಎಂದು ಬಿಜೆಪಿ ನಾಯಕ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಕಾಶಿ ಕ್ಷೇತ್ರ ರಾಜರ ದಾಳಿಗೆ ತುತ್ತಾಗಿ ಹಾಳಾಗಿತ್ತು. ಆಗ ಅದನ್ನು ಕುರುಬ ಸಮುದಾಯದ ಇಂಧೂರಿನ ಮಹಾರಾಣಿ ಅಹ್ಯಾ ಬಾಯಿ ಔರ್ಕರ್ ರಕ್ಷಣೆ ಮಾಡಿದ್ದರು. ಆದರೆ ಕಾಶಿ ಉಳಿಸಿದ ಮಹಾರಾಣಿಯನ್ನೇ ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ. ಈ ಮೂಲಕ ಚರಿತ್ರೆಯನ್ನೇ ಮರೆತಿದ್ದಾರೆ. ರಾಣಿ ಅಹಿಲ್ಯಾಬಾಯಿಯವರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಣಿ ಅಹಿಲ್ಯಾ ಮಹಾರಾಣಿ ಯುದ್ಧಕ್ಕೆ ಬದಲಾಗಿ ಬುದ್ದಿವಂತಿಕೆಯಿಂದ ಕಾಶಿ ವಿಶ್ವನಾಥ ದೇವಾಲಯವನ್ನು ಉಳಿಸಿದರು. ಕಾಶಿಯಲ್ಲಿ ಮೊದಲ ಹಿಂದೂಧ್ವಜವನ್ನು ಹಾರಿಸಿವರು ಕೂಡಾ ಅಹಿಲ್ಯಾ ಬಾಯಿಯವರೇ. ಅವರು ಯಾವಾಗಲೂ ಶಿವನ‌ ಹೆಸರಿನಲ್ಲೇ ಆಡಳಿತ ಮಾಡುತ್ತಿದ್ದರು.ಅಂತವರನ್ನು ಈಗ ಮರೆಯಲಾಗಿದೆ. ನೀವು ಚರಿತ್ರೆ ಮುಚ್ಚಿ ಹಾಕಲು ಹೊರಟಿದ್ದೀರಿ. ತಕ್ಷಣದಲ್ಲಿ ಆ ಸ್ಥಳದಲ್ಲಿ ಅಹಲ್ಯ ಬಾಯಿ ಔರ್ಕರ್ ಪ್ರತಿಮೆ ಸ್ಥಾಪಿಸಬೇಕು. ಅಷ್ಟೆ ಅಲ್ಲದೆ, ವಾರಾಣಸಿ ವಿಮಾನ ನಿಲ್ದಾಣಕ್ಕೆ ಅಹಿಲ್ಯಾ ಬಾಯಿ ಔರ್ಕರ್ ಹೆಸರಿಡಬೇಕೆಂದು ವಿಶ್ವನಾಥ್‌ ಆಗ್ರಹಿಸಿದರು.

Share Post