ಸದ್ದು ಮಾಡುತ್ತಿದೆ AI ತಂತ್ರಜ್ಞಾನ; AI ಕೋರ್ಸ್ ಪರಿಚಯಿಸಿದ ಬೆಂಗಳೂರು ವಿವಿ!
ಬೆಂಗಳೂರು; ಪ್ರಪಂಚದಾದ್ಯಂತ AI ಟೆಕ್ನಾಲಜಿ ಸಾಕಷ್ಟು ಸದ್ದು ಮಾಡುತ್ತಿದೆ.. ಎಲ್ಲಾ ಕ್ಷೇತ್ರಗಳಲ್ಲೂ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆಯಾಗುತ್ತಿದೆ.. ಹೀಗಾಗಿ ಈ ತಂತ್ರಜ್ಞಾನ ಗೊತ್ತಿರುವವರಿಗೆ ಹೆಚ್ಚು ಉದ್ಯೋಗಾವಕಾಶಗಳು ಸಿಗುತ್ತಿವೆ.. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ವಿಶ್ವವಿದ್ಯಾಲಯಗಳು AI ತಂತ್ರಜ್ಞಾನ ಕುರಿತಾದ ಕೋರ್ಸ್‌ಗಳನ್ನು ಪರಿಚಯಿಸುತ್ತಿವೆ.. ಅದೇ ರೀತಿ ಬೆಂಗಳೂರು ವಿಶ್ವವಿದ್ಯಾಲಯ ಕೂಡಾ ಮೂರು AI ಕೋರ್ಸ್‌ಗಳನ್ನು ಪರಿಚಯಿಸಿದೆ..
2024-25ನೇ ಸಾಲಿಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಮೂರು AI ಕೋರ್ಸ್‌ಗಳನ್ನು ಪರಿಚಿಸಿದೆ.. ಮೂರೂ ಕೂಡಾ ಪದವಿ ಕೋರ್ಸ್‌ಗಳಾಗಿದ್ದು, ಮೂರು ವರ್ಷದ ಅಧ್ಯಯನ ಮಾಡಬೇಕಿದೆ.. ಎಐ ಡೇಟಾ ಅನಾಲಿಸಿಸ್, ಎಐ ಮಷಿನ್ ಲರ್ನಿಂಗ್ ಹಾಗೂ ಫುಲ್‌ಸ್ಟಾಕ್ ಡೆವೆಲಪ್‌ಮೆಂಟ್ ಎಂಬ ಮೂರು ಕೋರ್ಸ್‌ಗಳನ್ನು ಈ ವರ್ಷ ಪರಿಚಯಿಸಲಾಗಿದೆ.. ಇದರಲ್ಲಿ ಯಾವುದೇ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು..
ಪಿಯುಸಿ ಬಳಿಕ ಟೆಕ್ನಿಕಲ್ ಕೋರ್ಸ್ ಮಾಡಬೇಕು ಎಂದುಕೊಳ್ಳುವವರಿಗೆ ಇದು ಸಹಕಾರಿ.. ಈಗಿನ್ನೂ ಎಐ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಈ ವಿಷಯದಲ್ಲಿ ಎಕ್ಸ್‌ಪರ್ಟ್ಸ್ ಕಡಿಮೆ ಇದ್ದಾರೆ.. ಹೀಗಾಗಿ ಈ ಕೋರ್ಸ್ ಮಾಡಿಕೊಂಡರೆ ಉದ್ಯೋಗಾವಕಾಶ ಕೂಡಾ ಬೇಗ ಸಿಗುತ್ತದೆ.. ಇನ್ನು ವಿದ್ಯಾರ್ಥಿಗಳ ಪ್ರತಿಕ್ರಿಯೆ ಆಧರಿಸಿ ಸ್ನಾತಕೋತ್ತರ ಪದವಿ ಕೂಡಾ ತೆರೆಯಲು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ..