ಚಿರತೆ ಜೊತೆ ಸೆಲ್ಫಿ ತೆಗೆಯಲು ಹೋದ ಮೈಸೂರಿನ ವ್ಯಕ್ತಿ; ಮುಂದೇನಾಯ್ತು..?
ಮೈಸೂರು; ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದ ಚಿರತೆ ಜೊತೆ ಸೆಲ್ಫಿ ತೆಗೆಯಲು ಹೋದ ಮೈಸೂರಿನ ವ್ಯಕ್ತಿ ಗಾಯಗೊಂಡಿದ್ದಾರೆ.. ನಂಜನಗೂಡು ತಾಲ್ಲೂಕಿನ ಯಾಲಹಳ್ಳಿಯಲ್ಲಿ ಈ ಘಟನೆ ನಡೆದಿದೆ.. ಈ ಭಾಗದಲ್ಲಿ ಜನರಿಗೆ ತಲೆನೋವಾಗಿ ಚಿರತೆಯನ್ನು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿತ್ತು.. ಅದು ಮಲಗಿದಂತೆ ಇತ್ತು.. ಅದರ ಹತ್ತಿರದ ಹೋದ ವ್ಯಕ್ತಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ.. ಈ ವೇಳೆ ಚಿರತೆ ಆತನ ಮೇಲೆ ದಾಳಿ ಮಾಡಿದೆ..
ಜಯಶಂಕರ್ ಎಂಬ ವ್ಯಕ್ತಿಯೇ ಚಿರತೆ ದಾಳಿಗೆ ಒಳಗಾದ ವ್ಯಕ್ತಿ.. ಚಿರತೆ ದಾಳಿ ಮಾಡುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ.. ಕೂಡಲೇ ಆತನನ್ನು ರಕ್ಷಣೆ ಮಾಡಿದ್ದಾರೆ.. ಗಾಯಾಳುವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..