ಗಾಜಿಯಾಬಾದ್ ಗ್ಯಾಂಗ್‌ರೇಪ್ ಕಟ್ಟುಕಥೆ; ತನಿಖೆಯಲ್ಲಿ ಬಬಹಿರಂಗ
ನವದೆಹಲಿ; ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಹಿಳೆಯ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿತ್ತು ಎಂದು ವರದಿಯಾಗಿತ್ತು. ಆದ್ರೆ, ಆ ಪ್ರಕರಣಕ್ಕೆ ಬೇರೊಂದು ತಿರುವು ಸಿಕ್ಕಿದೆ. ಇದು ಒಂದು ಕಟ್ಟುಕಥೆ ಎಂಬುದು ತನಿಖೆಯಿಂದ ಬಯಲಾಗಿದೆ. ಆಸ್ತಿ ವಿವಾದದ ಕಾರಣ ವಿರೋಧಿಯನ್ನು ಕಾನೂನಿನ ಅಡಕತ್ತರಿಯಲ್ಲಿ ಸಿಲುಕಿಸಲು ಮಹಿಳೆ ಸಾಮೂಹಿಕ ಅತ್ಯಾಚಾರದ ನಾಟಕವಾಡಿದ್ದಾಳೆ ಅನ್ನೋದು ಬಯಲಾಗಿದೆ.
ದೆಹಲಿ ಮೂಲದ 38 ವರ್ಷ ಮಹಿಳೆ ಮೇಲೆ ಗಾಜಿಯಾಬಾದ್‌ನ ಪುರುಷರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿ, ಆ ಮಹಿಳೆಯನ್ನು ರಸ್ತೆ ಪಕ್ಕ ಬಿಸಾಡಲಾಗಿತ್ತು ಎಂದು ವರದಿಯಾಗಿತ್ತು. ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆಯಾಗಿದ್ದಳು. ಈ ವೇಳೆ ಮಹಿಳೆ ಆರೋಪಿಯೊಬ್ಬನ ಹೆಸರು ಹೇಳಿ ಆತ ಗುಂಪು ಕಟ್ಟಿಕೊಂಡು ಬಂದು ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ಕ್ರೂರವಾಗಿ ಹಿಂಸೆ ಮಾಡಿದ್ದಾನೆ ಎಂದು ಆರೋಪಿಸಿದ್ದಳು. ಆದ್ರೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಅದು ಕಟ್ಟುಕಥೆ ಅನ್ನೋದು ಸಾಬೀತಾಗಿದೆ.
ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಆಸ್ತಿ ವಿವಾದವಿತ್ತು. ಹೀಗಾಗಿ ಆತನನ್ನು ಸಿಲುಕಿಸಲು ಅಜಾದ್ ಎಂಬಾತನೊಂದಿಗೆ ಸೇರಿ ಕಟ್ಟು ಕಥೆ ಕಟ್ಟಿದ್ದಾಳೆ. ಇದೀಗ ಪೊಲೀಸರು ಆಜಾದ್ ಹಾಗೂ ಆತನ ಸಹಚರರಾದ ಗೌರವ್ ಹಾಗೂ ಅಫ್ಜಲ್‌ರನ್ನು ಬಂಧಿಸಿದ್ದಾರೆ.