Sports

ಟೆಸ್ಟ್‌ ಕ್ರಿಕೆಟ್‌ ನಾಯಕತ್ವಕ್ಕೂ ಗುಡ್‌ ಬೈ ಹೇಳಿದ ವಿರಾಟ್‌ ಕೊಹ್ಲಿ

ಮುಂಬೈ : ಭಾರತ ಟೆಸ್ಟ್‌ ತಂಡದ ನಾಯಕರಾಗಿದ್ದ ವಿರಾಟ್‌ ಕೊಹ್ಲಿ ಇಂದು ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲಿನ ನಂತರ ಟೆಸ್ಟ್‌ ಕ್ರಿಕೆಟ್‌ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ವಿದಾಯ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಏಕದಿನ ಸರಣಿಗೆ ರೋಹಿತ್‌ ಶರ್ಮಾ ಆವರನ್ನು ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಬಿಸಿಸಿಐ ನಿರ್ಧಾರದ ಮೇಲೆ ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದ ವಿರಾಟ್‌ ಕೊಹ್ಲಿ ಈಗ ಟೆಸ್ಟ್‌ ನಾಯಕತ್ವಕ್ಕೂ ಗುಡ್‌ ಬೈ ಹೇಳಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ನಂತರ ಕ್ಯಾಪ್ಟೆನ್ಸಿ ವಹಿಸಿಕೊಂಡಿದ್ದ ವಿರಾಟ್‌ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಟಿ-20 ಕ್ರಿಕೆಟ್‌ ನಾಯಕತ್ವವನ್ನು ಮೊದಲು ತ್ಯಜಿಸಿದ ವಿರಾಟ್‌ ಅವರನ್ನು ಏಕದಿನ ಕ್ರಿಕೆಟ್‌ ಇಂದಲೂ ಕೆಳಗಿಳಿಸಿ ಬಿಸಿಸಿಐ ಶಾಕ್‌ ನೀಡಿತ್ತು.

ವಿರಾಟ್‌ ಕೊಹ್ಲಿ ತಾವು ನಾಯಕತ್ವದಿಂದ ಕೆಳಗೆ ಇಳಿಯುತ್ತಿರುವ ವಿಷಯವನ್ನುಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಕೂಡಲೇ ವೈರಲ್‌ ಆಗಿದೆ. ಎಲ್ಲರೂ ವಿರಾಟ್‌ ನಾಯಕತ್ವ ತ್ಯಜಿಸಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

 

Share Post