International

ಮಾನವೀಯತೆಗೆ ಸಾಕ್ಷಿಯಾಯ್ತು ಮಗುವಿನ ಜನ್ಮ:ವಿಡಿಯೋ ವೈರಲ್

ಬ್ರೆಜಿಲ್:‌  ಬಸ್​ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿ  ನಡೆದಿದೆ. ಬಸ್‌ನಲ್ಲಿ ಪ್ರಯಾಣ ಮಾಡುವಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಹ ಪ್ರಯಾಣಿಕರ ಸಹಾಯದಿಂದ ಮಹಿಳೆ ಮತ್ತು ಗಂಡು ಮಗು ಆರೋಗ್ಯವಾಗಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಗುಡ್​ನ್ಯೂಸ್​ ಮೂಮೆಂಟ್​ ಎನ್ನುವ ಇನ್ಸ್ಟಾಗ್ರಾಮ್​ ಪುಟ ಈ ವಿಡಿಯೋವನ್ನು ಹಂಚಿಕೊಂಡಿದೆ. ಮಹಿಳೆಗೆ ಹೆರಿಗೆ ನೋವು ಶುರುವಾಗ್ತಿದ್ದಂತೆ ಡ್ರೈವರ್​ ಬಸ್​ ಅನ್ನು ಆಸ್ಪತ್ರೆಯ ಕಡೆ ತಿರುಗಿಸಿದ್ದಾನೆ.  ರಿಯೊ ಡಿ ಜನೈರೋದ ರೋಚಾ ಫರಿಯಾ ಆಸ್ಪತ್ರೆ ಬಳಿ ಬರುತ್ತಿದ್ದ ಹಾಗೆ ಮಹಿಳೆಗೆ ಬಸ್‌ನಿಂದ ಇಳಿಯಲು ಸಾಧ್ಯವಾಗಲಿಲ್ಲ. ಕೂಡಲೇ  ಅಲ್ಲಿನ  ಸಿಬ್ಬಂದಿ ಸಹಾಯ ಪಡೆದು ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. ಬಸ್​ನಲ್ಲಿದ್ದ ಸಹ ಪ್ರಯಾಣಿಕರು ಕೂಡ ಮಹಿಳೆಗೆ ಸಹಾಯಮಾಡಿದ್ದಾರೆ. ಮಹಿಳೆ ಗಂಡು ಮಗು ಜನಿಸಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು  ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ.

 

 

Share Post