Sports

Ind vs Wi : ಇಂದು ಮೊದಲ T20 ಪಂದ್ಯ

ಕೋಲ್ಕತ್ತ : ಇಂದು ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಮೊದಲ ಟಿ20 ಪಂದ್ಯ ನಡೆಯಲಿದೆ. ಸಂಜೆ 7ರಿಂದ ಪಂದ್ಯ ಶುರುವಾಗಲಿದೆ. ಈಡನ್‌ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯಲಿದೆ.

ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಭಾರತ ತಂಡ T20 ಯಲ್ಲಿಯೂ ಅದೇ ಸಾಧನೆ ಮುಂದುವರೆಸಲು ಉತ್ಸುಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ರೋಹಿತ್‌ ಶರ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ನಾಯು ಸೆಳೆತದ ಕಾರಣ ತಂಡದ ಉಪನಾಯಕ ಕೆ.ಎಲ್‌.ರಾಹುಲ್‌ ಅಲಭ್ಯರಾಗಿದ್ದಾರೆ. ಇವರ ಬದಲು ಋತುರಾಜ್‌ ಗಾಯಕ್‌ವಾಡ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಋತುರಾಜ್‌ ಅವರಿಗೆ ಸ್ಥಾನ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಚಹಲ್‌ ಸ್ಪಿನ್‌ ದಾಳಿಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಬೂಮ್ರಾ ಮತ್ತು ಶಮಿ ಅವರಿಗೆ ರೆಸ್ಟ್‌ ನೀಡಿರುವ ಟೀಂ ಇಂಡಿಯಾ ಭುವನೇಶ್ವರ್‌ ಜೊತೆಗೆ ಮೊಹಮ್ಮದ್‌ ಸಿರಾಜ್‌ ಮತ್ತು ಅವೇಶ್‌ ಖಾನ್‌ ಮೇಲೆ ಅವಲಂಬಿತರಾಗಿದ್ದಾರೆ. ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನು ವೆಸ್ಟ್‌ ಇಂಡೀಸ್‌ ತಂಡದ ಆಡುವ ಹನ್ನೊಂದರ ಪಟ್ಟಿ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

Share Post