Sports

IPL 2022 : ಹರಾಜಿನಿಂದ ಹಿಂದೆ ಸರಿದ ಪ್ರಮುಖ ಆಟಗಾರರು

ಮುಂಬೈ : ಐಪಿಎಲ್‌ 2022 ನಾನಾ ಕಾರಣಗಳಿಂದ ಬಾರಿ ಕುತೂಹಲ ಕೆರಳಿಸಿದೆ. ಈ ಬಾರಿ ಮೆಗಾ ಆಕ್ಷನ್‌ ನಡೆಯುತ್ತಿರುವುದು ಕೂಡ ಒಂದು ಕಾರಣವಾಗಿದೆ. ಸಾಕಷ್ಟು ಕೋವಿಡ್‌ ಸಮಸ್ಯೆಯ ನಡುವೆಯೂ ಬಿಸಿಸಿಐ ಪಂದ್ಯ ನಡೆಸಲು ತೀರ್ಮಾನಿಸಿದೆ. ಭಾರತದಲ್ಲಿಯೇ ನಡೆಸುತ್ತಾ ಅಥವಾ ಹೊರದೇಶದಲ್ಲಿ ಆಯೋಜಿಸುತ್ತಾ ಎಂದು ಕಾದು ನೋಡಬೇಕು.

ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರಿದ್ದರೆ, 318 ವಿದೇಶಿ ಆಟಗಾರರಿದ್ದಾರೆ.

ಈ ಬಾರಿ ಮೆಗಾ ಆಕ್ಷನ್‌ ನಲ್ಲಿ ಕೆಲವು ಪ್ರಮುಖ ಆಟಗಾರರ ಹೆಸರು ಕಾಣಿಸಿಕೊಳ್ಳುವುದಿಲ್ಲ. ಯಾರು ಮತ್ತು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ.

೧. ಕ್ರಿಸ್‌ಗೇಯ್ಲ್‌ : ಈ ಬಾರಿ ಅವರು ಹೆಸರು ನೀಡಿಲ್ಲ. ಬಹುಶಃ ಇದು ಕ್ರಿಸ್‌ ಗೇಯ್ಲ್‌ ಅವರ ಯುಗಾಂತ್ಯವೆಂದು ಪರಿಗಣಿಸಬಹುದು.  14 ಸೀಸನ್‌ ಐಪಿಎಲ್‌ ಆಡಿದ್ದ ಕ್ರಿಸ್‌ಗೇಯ್ಲ್‌ ಈ ಬಾರಿ ಹೆಸರು ನೀಡಿಲ್ಲ

೨. ಬೆನ್‌ಸ್ಟೋಕ್ಸ್‌ : ರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ಸಲುವಾಗಿ ಹೆಸರು ನೊಂದಾಯಿಸಿಲ್ಲ

೩. ಸ್ಯಾಮ್‌ಕರ್ರನ್‌ : ಫಿಟ್ನೆಸ್‌ ಸಮಸ್ಯೆಯಿಂದ ಸ್ಯಾಮ್‌ ಈ ಬಾರಿಯ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ

೪. ಜೋಫ್ರಾ ಆರ್ಚರ್‌ : ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜೋಫ್ರಾ ಆರ್ಚರ್ ಕೂಡ ಐಪಿಎಲ್ 2022 ರ ಮೆಗಾ ಹರಾಜಿಗಾಗಿ ಹೆಸರು ನೀಡಿಲ್ಲ

೫. ಮಿಚೆಲ್‌ ಸ್ಟಾರ್ಕ್‌ : 2018ರಲ್ಲಿ ಗಾಯದ ಸಮಸ್ಯಯಿಂದ ಐಪಿಎಲ್‌ನಿಂದ ಹೊರ ನಡೆದಿದ್ದ ಮಿಚೆಲ್‌ ಈ ಬಾರಿಯೂ ಹೆಸರು ನೀಡಿಲ್ಲ

 

 

 

Share Post