Sports

ಫೋಗಟ್ ಚಿನ್ನದ ಕನಸು ಭಗ್ನ; ತೂಕ ಹೆಚ್ಚಿದ್ದಕ್ಕೆ ಅನರ್ಹ

ಪ್ಯಾರಿಸ್: ವಿನೇಶ್ ಫೋಗಟ್ ಚಿನ್ನದ ಕನಸು ನುಚ್ಚು ನೂರಾಗಿದೆ. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದರಿಂದ ಅವರು ಅನರ್ಹಗೊಂಡಿದ್ದಾರೆ.

  ಫೈನಲ್ ಪಂದ್ಯಕ್ಕೂ ಮೊದಲು ತೂಕ ಪರೀಕ್ಷೆ ಮಾಡಲಾಗಿದ್ದು, ಫೋಗಟ್ 50 ಕೆಜಿ 100 ಗ್ರಾಂ ಇದ್ದಾರೆ. ಹೀಗಾಗಿ ಅವರು ಫೈನಲ್ ಸ್ಪರ್ಧೆ ಇಂದ ಹೊರಬಿದ್ದಿದ್ದಾರೆ.

 ನಿನ್ನೆ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಫೋಗಟ್ ಮಣಿಸಿದ್ದರು. ಇಂದು ಫೈನಲ್ ಆಡಬೇಕಿತ್ತು.

 

Share Post