DistrictsSports

ಕುಂದಾನಗರಿಯಲ್ಲಿ ಕ್ರಿಕೆಟ್‌ ದೇವರು; ಗೂಡಂಗಡಿಯಲ್ಲಿ ಟೀ ಸೇವಿಸಿದ ತೆಂಡೂಲ್ಕರ್‌

ಬೆಳಗಾವಿ; ಸಚಿನ್‌ ತೆಂಡೂಲ್ಕರ್‌ ಅವರು ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ್ದು, ಗೂಡಂಗಡಿಯಲ್ಲಿ ಟೀ ಸೇವನೆ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಮುಂಬೈನಿಂದ ಗೋವಾಗೆ ತೆರಳತ್ತಿದ್ದ ವೇಳೆ ಬೆಳಗಾವಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಗೂಡಂಗಡಿಯಲ್ಲಿ ಚಹಾ ಸೇವಿಸಿದ್ದಾರೆ.

ಬೆಳಗಾವಿ ನಗರದ ಹೊರವಲಯದ ಮಚ್ಛೆ ಬಳಿಯ ಎನ್‌ಹೆಚ್‌-೪ರಲ್ಲಿ ವೈಜು ನಿತೂರ್ಕರ್‌ ಎಂಬುವವರ ಫೌಜಿ ಟೀ ಸ್ಟಾಲ್‌ನಲ್ಲಿ ಸಚಿನ್‌ ಟೀ ಕುಡಿದಿದ್ದಾರೆ. ಈ ವೇಳೆ ಸಾರ್ವಜನಿಕರು ಸಚಿನ್‌ ಜೊತೆ ಸೆಲ್ಫಿ ಹಾಗೂ ವಿಡಿಯೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

Share Post