Sports

ಕಬಡ್ಡಿಗೂ ಅಡ್ಡಗಾಲಿಟ್ಟ ಕೊರೊನಾ : ವೇಳಾಪಟ್ಟಿಯಲ್ಲಿ ಬದಲಾವಣೆ

ಬೆಂಗಳೂರು : ಕೊರೊನಾ ಮೂರನೇ ಅಲೆಯಿಂದ ಪ್ರೋ ಕಬಡ್ಡಿ ಲೀಗ್‌ ಪಂದ್ಯಗಳಿಗೆ ತೊಂದರೆ ಆಗಿದೆ. ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಎರಡು ತಂಡದ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂದಿನಿಂದ ಜನವರಿ 28ರ ವರೆಗೆ ದಿನಕ್ಕೆ ಒಂದೇ ಪಂದ್ಯ ನಡೆಯಲಿದೆ. ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈಟ್‌ಫೀಲ್ಡ್‌ನ ಶೆರಟಾನ್‌ ಹೊಟೆಲ್‌ನ ಕಠಿಣ ಬೈಯೋ ಬಬಲ್‌ನಲ್ಲಿ ತಂಡ ಇದ್ದರೂ ಕೂಡ ಸೋಂಕು ತಗುಲಿದೆ.

ಮುಂಚಿನ ವೇಳಾಪಟ್ಟಿಯ ಪ್ರಕಾರ ದಿನಕ್ಕೆ ಎರಡು ಪಂದ್ಯಗಳು ಮತ್ತು ಶನಿವಾರ ಮತ್ತು ಭಾನುವಾರ ಮೂರು ಪಂದ್ಯಗಳು ನಡೆಯುತ್ತಿದ್ದವು ಆದರೆ ಈಗ ದಿನಕ್ಕೆ ಒಂದೇ ಪಂದ್ಯವನ್ನು ಆಯೋಜಿಸಲಿದೆ. ಜನವರಿ 28 ರ ನಂತರ ಮತ್ತೆ ಪರಿಸ್ಥಿತಿ ನೋಡಿಕೊಂಡು ತಿಳಿಸುವುದಾಗಿ ಹೇಳಿದ್ದಾರೆ.

ಪ್ರೋ ಕಬಡ್ಡಿ ಸೀಸನ್‌ ೮ರ ಅಂಕಪಟ್ಟಿ ಹೀಗಿದೆ.

 

Share Post