Sports

ಪ್ಯಾರಿಸ್ ಒಲಿಂಪಿಕ್ಸ್‌; ಭಾರತದ ಮುಡಿಗೆ ಮೊದಲ ಪದಕ, ಮನು ಬಾಕರ್‌ಗೆ ಕಂಚು

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.. ಮಹಿಳಾ ಪಿಸ್ತೂಲ್ 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಭರವಸೆ ಎಂದೇ ಕರೆಯಲಾದ ಮನು ಬಾಕರ್‌ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.. 20 ವರ್ಷದ ನಂತರ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಮನು ಬಾಕರ್‌ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಇವರು ಕಂಚು ಪದಕ ಪಡೆಯುವುದರೊಂದಿಗೆ ಭಾರತದ ಪದಕ ಖಾತೆ ಶುರು ಮಾಡಿದ್ದಾರೆ..
ಮನುಬಾಕರ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ 221.7 ಅಂಕ ಗಳಿಸಿ ಕಂಚಿನ ಪದಕ ಪಡೆದರು. ಇದೇ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಇಬ್ಬರು ಕೊರಿಯನ್ನರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

Share Post