25ರ ಯುವತಿಯನ್ನು ಮದುವೆಯಾದ 70 ವರ್ಷದ ಅಜ್ಜ!
ಬಿಹಾರ; ವೃದ್ಧ ರೈತನೊಬ್ಬ 70 ವರ್ಷ ವಯಸ್ಸಿನಲ್ಲಿ 25 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ.. ಬಿಹಾರದ ಗಯಾ ಜಿಲ್ಲೆಯ ಬೈದಾ ಎಂಬಲ್ಲಿ ಈ ಘಟನೆ ನಡೆದಿದೆ.. ತನ್ನ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಇದರಿಂದಾಗಿ ವೃದ್ಧ ಒಂಟಿಯಾಗಿ ಜೀವನ ಮಾಡುತ್ತಿದ್ದ.. ಇದೀಗ ಈತ ಬಡವರ ಮನೆಯಲ್ಲಿ ಹೆಣ್ಣು ನೋಡಿ 25ರ ಯುವತಿಯನ್ನು ಮದುವೆಯಾಗಿದ್ದಾಳೆ.. ಆಸ್ತಿಗಾಗಿ ಪೋಷಕರು ಯುವತಿಯ ಬಾಳನ್ನು ಹಾಳು ಮಾಡಿದ್ದಾರೆ..
ಹಮ್ಜಾಪುರದ ಇಸ್ಲಾಂನಗರದ ವಾಸಿ ರೇಷ್ಮಾ ಎಂಬಾಕೆಯನ್ನು 70 ವರ್ಷದ ಸಲೀಮುಲ್ಲಾ ನೂರಾನಿ ಎಂಬಾತ ಮದುವೆಯಾಗಿದ್ದು, ಇದರ ವಿಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದೆ.. ಇಸ್ಲಾಮಿಕ್ ಆಚರಣೆಗಳ ಪ್ರಕಾರ ಇವರ ಮದುವೆಯಾಗಿದೆ.. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಕಮೆಂಟ್‌ಗಳು ಬರುತ್ತಿವೆ.. ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದಕ್ಕಿಂತ ಇದು ಒಳ್ಳೆಯದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ವಯಸ್ಸಲ್ಲಿ ಮದುವೆ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ..