BengaluruCrime

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ರ‍್ಯಾಪಿಡೊ ಬೈಕ್ ಸವಾರ!

ನೆಲಮಂಗಲ; ರ‍್ಯಾಪಿಡೊ ಬೈಕ್ ಸವಾರ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.. ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿಕೊಂಡಿದ್ದ 35 ವರ್ಷದ ಮಹಿಳೆ, ಸವಾರನ ವಿರುದ್ಧ ಬಾಗಲಗುಂಟೆ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.. ಬೈಕ್‌ ಸವಾರ ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಆಕೆ ಆರೋಪ ಮಾಡಿದ್ದಾನೆ..
ಜೈಪುರ ಮೂಲದ 27 ವರ್ಷದ ಮಹೇಶ್‌ ಎಂಬಾತನೇ ಈ ರೀತಿಯಾಗಿ ಆರೋಪ ಮಾಡಿದವನು.. ಮಹಿಳೆಯ ಜಾಲಹಳ್ಳಿ ಎನ್‌ಎಂಟಿಯಿಂದ ದಾಸರಹಳ್ಳಿಗೆ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದರು.. ಈ ಮಾರ್ಗಮಧ್ಯೆ ಬೈಕ್‌ ಸವಾರ ಅಸಭ್ಯವಾಗಿ ವರ್ತಿಸಿದ್ದಾನೆ ಅಂತ ದೂರಿನಲ್ಲಿ ಆರೋಪ ಮಾಡಲಾಗಿದೆ.. ಮಹಿಳೆ ಮಾರ್ಗ ಮಧ್ಯೆಯೇ ಬೈಕ್‌ ನಿಲ್ಲಿಸುವಂತೆ ಹೇಳಿದ್ದು, ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.. ಇದರಿಂದಾಗಿ, ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ..

Share Post