U19 World Cup : ಐದನೇ ಬಾರಿ ಫೈನಲ್ ಪ್ರವೇಶಿಸಿದ ಭಾರತ
U19 ವಿಶ್ವಕಪ್ : ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನಲ್ಲಿ ಯಶ್ ಧುಲ್ ನಾಯಕತ್ವದ ಭಾರತ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಬಗ್ಗು ಬಡಿದು ಫೈನಲ್‌ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಅಂಡರ್-19 ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲೇ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ನಂತರ ಜೊತೆಯಾದ ಯಶ್ ಧುಲ್ ಹಾಗೂ ಶೇಕ್ ರಶೀದ್ ಆಸ್ಟ್ರೇಲಿಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.
ಯಶ್ ಧುಲ್ (110) ಶತಕ ಗಳಿಸಿದರೆ ರಶೀದ್ 94 ರನ್‌ಗಳಿಸಿದ್ದಾರೆ. ಈ ಇಬ್ಬರ ದ್ವಿಶತಕದ ಜೊತೆಯಾಟದಿಂದ ಭಾರತವು ಆಸ್ಟ್ರೇಲಿಯ ತಂಡಕ್ಕೆ 291 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಕಣಕ್ಕಿಳಿದ ಆಸ್ಟ್ರೇಲಿಯ 194 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು.
ಫೆಬ್ರುವರಿ 5 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ನಡೆಯಲಿದೆ.
WHAT. A. PERFORMANCE! ? ?
India U19 beat Australia U19 by 9⃣6⃣ runs & march into the #U19CWC 2022 Final. ? ? #BoysInBlue #INDvAUS
This is India U19's 4th successive & 8th overall appearance in the U19 World Cup finals. ?
Scorecard ➡️ https://t.co/tpXk8p6Uw6 pic.twitter.com/tapbrYrIMg
— BCCI (@BCCI) February 2, 2022