Sports

24.75 ಕೋಟಿಗೆ ಕೆಕೆಆರ್‌ ಪಾಲಾದ ಮಿಚೆಲ್ ಸ್ಟಾರ್ಕ್

ಮುಂಬೈ; ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ದಾಖಲೆ ಬೆಲೆಗೆ ಪಾತ್ರರಾಗಿದ್ದಾರೆ. ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರೂ.24.75 ಕೋಟಿಗೆ ಖರೀದಿಸಿತು. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಅವರಿಗಾಗಿ ಪೈಪೋಟಿ ನಡೆಸಿದ್ದವು. ಅಂತಿಮ ಹಂತದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೆಕೆಆರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಅವರನ್ನು ಕೆಕೆಆರ್‌ ಖರೀದಿ ಮಾಡಿದೆ.

ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತು. ಪ್ಯಾಟ್ 20.5 ಕೋಟಿ ರೂ.ಗೆ ಕಮ್ಮಿನ್ಸ್ ಮತ್ತು ರೂ.6.8 ಕೋಟಿಗೆ ಹೆಡ್ ಪಡೆದರು.

Share Post