InternationalPolitics

ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನರ್ಹರು; ಕೊಲೊರಾಡೋ ಸುಪ್ರೀಂ ಕೋರ್ಟ್

ಅಮೆರಿಕ; ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನರ್ಹರು ಎಂದು ಕೊಲೊರಾಡೊ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಯಲ್ಲಿ ಟ್ರಂಪ್ ಭಾಗಿಯಾಗಿರುವ ಕಾರಣ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಟ್ರಂಪ್ ಅನರ್ಹರು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಯುಎಸ್ ಸಂವಿಧಾನದ 14 ನೇ ತಿದ್ದುಪಡಿಯ ಮೂರನೇ ವಿಭಾಗವನ್ನು ಬಳಸಿಕೊಂಡು ಅಧ್ಯಕ್ಷೀಯ ಅಭ್ಯರ್ಥಿಯನ್ನು ಅನರ್ಹಗೊಳಿಸಿರುವುದು ಇದೇ ಮೊದಲು. ಕೊಲೊರಾಡೋ ಸುಪ್ರೀಂ ಕೋರ್ಟ್ 4-3 ಬಹುಮತದಿಂದ ತೀರ್ಪು ನೀಡಿತು. ಈ ತೀರ್ಪು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಟ್ರಂಪ್ ಬೆಂಬಲಿಗರು ಹೇಳಿದ್ದಾರೆ.

ಈ ತೀರ್ಪು ಮಾರ್ಚ್ 5ರ ಪ್ರಾಥಮಿಕ ಚುನಾವಣೆಗೆ ಮಾತ್ರ ಅನ್ವಯಿಸುತ್ತದೆ. ಆ ದಿನ, ರಿಪಬ್ಲಿಕನ್ ಮತದಾರರು ತಮ್ಮ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಈ ತೀರ್ಪು ಮುಂದಿನ ನವೆಂಬರ್ ನಲ್ಲಿ ಕೊಲೊರಾಡೋದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು. ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಿರುವ ಕೊಲೊರಾಡೊ ನ್ಯಾಯಾಲಯ, ಮುಂದಿನ ತಿಂಗಳವರೆಗೆ ಆದೇಶಕ್ಕೆ ತಡೆ ನೀಡುವುದಾಗಿ ಹೇಳಿದೆ.

Share Post