ಗಂಡನೇ ಆದರೂ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರ; ಗುಜರಾತ್ ಹೈಕೋರ್ಟ್
ಗಾಂಧಿನಗರ; ಅತ್ಯಾಚಾರ ಎಂದರೆ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸುವಂತಹದ್ದು. ಅದನ್ನು ಯಾರು ಮಾಡಿದರೂ ಅತ್ಯಾಚಾರವೇ. ತನ್ನ ಹೆಂಡತಿಯನ್ನು ಬಲವಂತ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೆ ಅದೂ ಕೂಡಾ ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಹೇಳಿದ್ದಾರೆ.
ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್, ಕೆನಡಾ ಮುಂತಾದ ದೇಶಗಳಲ್ಲಿ ಬಲವಂತದಿಂದ ಗಂಡನೇ ಲೈಂಗಿಕ ಕ್ರಿಯೆ ನಡೆಸೋದೂ ಕಾನೂನು ಬಾಹಿರವಾಗಿದೆ. ಹೀಗಾಗಿ ಪತ್ನಿಗೆ ಇಷ್ಟವಿಲ್ಲದಿದ್ದರೂ ಬಲವಂತ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ನಾನು ಅಪರಾಧ ಎಂದು ಒಪ್ಪಿಕೊಳ್ಳುವೆ ಎಂದು ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಹೇಳಿದ್ದಾರೆ.
ಮಹಿಳೆಯೊಬ್ಬಳು ತನ್ನ ಪತಿ ಬಲವಂತ ಮಾಡಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ಕೃತ್ಯಕ್ಕೆ ನನ್ನ ಅತ್ತೆಯೂ ಸಹಕಾರ ನೀಡಿದ್ದಾಳೆ ಎಂದು ಕೋರ್ಟ್ ಮೊರೆ ಹೋಗಿದ್ದಳು. ಈ ಕೇಸ್ ವಿಚಾರಣೆ ನಡೆಸಿದ ಹೈಕೋರ್ಟ್, ಇದು ಅತ್ಯಾಚಾರ ಎಂದು ಪರಿಗಣಿಸಿ ಗಂಡ ಮತ್ತು ಅತ್ತೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.