Sports

Ind vs Wi T20: ಸರಣಿ ವಶಪಡಿಸಿಕೊಂಡ ಭಾರತ

ಕೋಲ್ಕತ್ತ : ಎರಡನೇ ಟಿ20 ಪಂದ್ಯದಲ್ಲಿ ಭಾರತ ವೆಸ್ಟ್‌ಇಂಡೀಸ್‌ಗೆ ಸೋಲಿನ ರುಚಿ ತೋರಿಸಿದೆ. ಇದರಿಂದ ಸರಣಿಯಲ್ಲಿ 2-0 ಅಂತರ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿದೆ.

ವಿರಾಟ್‌ ಮತ್ತು ರಿಷಭ್‌ ಪಂತ್‌ ಅವರ ಅದ್ಭುತ ಅರ್ಧ ಶತಕದ ನೆರವಿನಿಂದ ಭಾರತವು 8 ರನ್​​ಗಳ ರೋಚಕ ಜಯ ಸಾಧಿಸಿತು. ಭಾರತವು ಆರಂಭಿಕ ಆಘಾತ ಅನುಭವಿಸಿದರೂ ಕೂಡ ನಂತರದ ಹಂತದಲ್ಲಿ ಚೇತರಿಸಿಕೊಂಡು  186ರನ್‌ಗಳನ್ನು ಗಳಿಸಿತು.

ಇದನ್ನು ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡ 3 ವಿಕೇಟ್‌ ಕಳೆದುಕೊಂಡು 178ರನ್‌ಗಳಿಸಿ ಸೋಲು ಒಪ್ಪಿಕೊಂಡಿತು. ನಿಕೋಲಸ್‌ ಪೂರನ್‌ ಮತ್ತು ಪೋವೆಲ್‌ ಉತ್ತಮ ಪ್ರದರ್ಶನ ನೀಡಿ ಭಾರತದ ಗೆಲುವು ಕಸಿಯುವಂತೆ ಕಂಡರು. ಆದರೆ ನಿಕೋಲಸ್‌ ಪೂರನ್‌ ಅವರು ಔಟ್‌ ಆದ ಮೇಲೆ ಆ ಆಸೆಗಳು ಕಮರಿಹೋದವು.

ಕೊನೆಯ ನಾಲ್ಕು ಎಸೆತಕ್ಕೆ 23 ರನ್‌ ಬೇಕಿದ್ದಾಗ ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿದ ಪೊವೆಲ್‌ ಭಾರತದ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಆದರೆ ನಂತರದ ಎಸೆತದಲ್ಲಿ ಸಿಂಗಲ್ಸ್‌ ಆಡಿದರ ಪರಿಣಾಮ ಭಾರತಕ್ಕೆ ಪಂದ್ಯ ಹಾಗೂ ಸರಣಿ ಜಯ ಸಂಧಿಸಿತು.

ರೋಹಿತ್‌ ನಾಯಕತ್ವದ ಗೆಲುವಿನ ನಾಗಾಲೋಟ ಮುಂದುವರೆದಿದೆ.

Share Post