Cinema

ಕಲಾತಪಸ್ವಿ ರಾಜೇಶ್‌ ನಿಧನ

ಬೆಂಗಳೂರು : ಕೆಲ ದಿನಗಳಿಂದ ರಾಜೇಶ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಿಡ್ನಿ ವೈಫಲ್ಯ , ಉಸಿರಾಟದ ತೊಂದರೆ ಇಂದ ಬಳಲುತ್ತಿದ್ದ ರಾಜೇಶ್‌ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿಸಿತ್ತು. ಹಲವು ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದ 89 ವರ್ಷದ ರಾಜೇಶ್‌ ಅವರು ಇಂದು ಮುಂಜಾನೆ ಇಹ ಲೋಕ ತ್ಯಜಿಸಿದ್ದಾರೆ.

ಇಂದು ಸಾಯಂಕಾಲದವರೆಗೂ ರಾಜೇಶ್‌ ಅವರ ವಿದ್ಯಾರಣ್ಯಪುರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದ ರಾಜೇಶ್‌ ಅವರು ನೆರೆ ರಾಜ್ಯಗಳಿಂದ ಬರುತ್ತಿದ್ದ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿದ್ದರು. ಧಾರವಾಡ ವಿಶ್ವವಿದ್ಯಾನಿಲಯವು ರಾಜೇಶ್‌ ಅವರಿಗೆ ಡಾಕ್ಟರೇಟ್‌ ನೀಡಿ ಗೌರವಿಸಿತ್ತು.

Share Post