ಟಾಟಾ ಸಂಸ್ಥೆಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ
ನವ ದೆಹಲಿ; ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಏರ್‌ಲೈನ್ಸ್ ಸಂಸ್ಥೆಯನ್ನು ಟಾಟಾ ಗ್ರೂಪ್‌ಗೆ ಇಂದು ಅಧಿಕೃತವಾಗಿ ಹಸ್ತಾಂತರ ಮಾಡಲಾಯಿತು. ದೆಹಲಿಯ ಏರ್‌ಲೈನ್ಸ್ ಹೌಸ್‌ನ್ನು ಟಾಟಾ ಗ್ರೂಪ್ ಹಸ್ತಾಂತರ ಮಾಡುವ ಮೂಲಕ ಏರ್ ಇಂಡಿಯಾ ಏರ್‌ಲೈನ್ಸ್ ಹಸ್ತಾಂತರ ಮಾಡಲಾಯಿತು. ಅನಂತರ ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಹಿನ್ನೆಲೆಯಲ್ಲಿ ಟಾಟಾ ಸನ್ಸ್ ಸಂಸ್ಥೆ ಚೇರ್ಮನ್ ಎನ್.ಚಂದ್ರಶೇಖರನ್, ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಾಳೆಯಿಂದ ಏರ್ ಇಂಡಿಯಾ ಏರ್‌ಲೈನ್ಸ್ ಟಾಟಾ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಣೆ ನಡೆಸಲಿದೆ. ಅಂದಹಾಗೆ ಟಾಟಾ ಸಂಸ್ಥೆಯೇ ಈ ಏರ್‌ಲೈನ್ಸ್ ಸ್ಥಾಪನೆ ಮಾಡಿತ್ತು. 1932ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಹೆಸರಿನಲ್ಲಿ ವಿಮಾನಯಾನ ಸಂಸ್ಥೆ ಆರಂಭಿಸಿದ್ದರು. ಅನಂತರ ಅದರ ಹೆಸರನ್ನು 1964ರಲ್ಲಿ ಏರ್ ಇಂಡಿಯಾ ಏರ್ ಲೈನ್ಸ್ ಎಂದು ಮರು ನಾಮಕರಣ ಮಾಡಲಾಯಿತು. ಇದಾದ ನಂತರ ಈ ಏರ್‌ಲೈನ್ಸ್‌ನ್ನು ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಲಾಗಿತ್ತು.
ಇದೀಗ ಏರ್ ಇಂಡಿಯಾ ಏರ್‌ಲೈನ್ಸ್ ಸಾಕಷ್ಟು ನಷ್ಟ ಅನುಭವಿಸಿತ್ತು. ಕೇಂದ್ರ ಸರ್ಕಾರಕ್ಕೆ ಇದನ್ನು ನಡೆಸುವುದು ದೊಡ್ಡ ಹೊರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನಯ ಹರಾಜಿಗಿಡಲಾಗಿತ್ತು. ಇದನ್ನು ಟಾಟಾ ಸಂಸ್ಥೆ ವಾಪಸ್ ಖರೀದಿ ಮಾಡಿದೆ.