ಆಕಾಶದಲ್ಲಿ ಮಿಂಚಿ ಮರೆಯಾದ ನಕ್ಷತ್ರ ಪುಂಜ: ವಿಜ್ಞಾನಿಗಳಿಂದ ಸಂಶೋಧನೆ
ಆಸ್ಟ್ರೇಲಿಯಾ: ಬಾಹ್ಯಾಕಾಶದಲ್ಲಿ ಒಂದು ವಿಚಿತ್ರ ನಡೆದಿದೆ. ಏನೋ ವಿಚಿತ್ರ ವಿಚಿತ್ರ ವಸ್ತು ಶಕ್ತಿಶಾಲಿ ಸಂಕೇತ ಆಕಾಶಕಾಯದಲ್ಲಿ ಮಿಂಚಿ ಮರೆಯಾಗಿದೆ. ಅದು ಏನೆಂದು ಸಂಶೋಧಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಿಂದೆಂದೂ ಕಾಣದಷ್ಟು ವಿಚಿತ್ರವಾಗಿರುವ ಈ ಬಾಹ್ಯಾಕಾಶ ವಸ್ತುವಿನ ಚಲನೆಯನ್ನು ಎಚ್ಚರಿಕೆಯಿಂದ ಗಮನಿಸಿ. ಇದು ಹೊಸ ನ್ಯೂಟ್ರಾನ್ ನಕ್ಷತ್ರವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಒಂದೇ ಬಾರಿ ನಿರ್ಣಯ ತೆಗೆದುಕೊಳ್ಳುವುದು ಕಷ್ಟಸಾಧ್ಯ, ಇದರ ರಹಸ್ಯವೇನೆಂದು ತಿಳಿಯಲು ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ನಕ್ಷತ್ರಪುಂಜದಲ್ಲಿ ಅನೇಕ ನಿಗೂಢ ರಹಸ್ಯಗಳು ಅಡಗಿವೆ. ಅವುಗಳಲ್ಲಿನ ಒಂದು ರಹಸ್ಯವು ಖಗೋಳಶಾಸ್ತ್ರಜ್ಞರನ್ನು ಕಾಡುತ್ತಿದೆ. ಬಾಹ್ಯಾಕಾಶದಲ್ಲಿ ಉಂಟಾದ ಕ್ಷೀರಪದಥ ರೇಡಿಯೋ ಸಂಕೇತಗಳು ವಿಜ್ಞಾನಿಗಳನ್ನು ವಿಸ್ಮಯಗೊಳಿಸಿವೆ. ಕ್ಷೀರಪಥವು ಸುಮಾರು 4,000 ಜ್ಯೋತಿರ್ವರ್ಷಗಳ ದೂರದಲ್ಲಿ ಪ್ರತಿ 18 ನಿಮಿಷಗಳಿಗೊಮ್ಮೆ ರೇಡಿಯೊ ತರಂಗಗಳನ್ನು ಹೊರಸೂಸುತ್ತದೆ ಎಂದು ಖಗೋಳಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಆದಾಗ್ಯೂ, ನಕ್ಷತ್ರಪುಂಜದಲ್ಲಿ ಗುರುತಿಸಲಾಗದ ನಕ್ಷತ್ರದಿಂದ ಅಲೆಗಳು (ಸಂಕೇತಗಳು) ಬರುತ್ತಿವೆ ಎಂಬುದನ್ನು ಕಂಡುಕೊಂಡಿದ್ದಾರೆ. ಆದರೂ ಆ ವಿಚಿತ್ರ ವಸ್ತು ಯಾವುದು ಎಂಬುದು ನಿಗೂಢವಾಗಿಯೇ ಉಳಿದಿದೆ.
ಆಸ್ಟ್ರೇಲಿಯಾದ ಪರ್ತ್‌ನಲ್ಲಿರುವ ಕರ್ಟಿನ್ ವಿಶ್ವವಿದ್ಯಾನಿಲಯದ ನತಾಶಾ ಹರ್ಲಿ-ವಾಕರ್ ಮತ್ತು ಅವರ ವಿಜ್ಞಾನಿಗಳ ತಂಡವು ರೇಡಿಯೋ ಟೆಲಿಸ್ಕೋಪ್ ಮರ್ಚಿಸನ್ ವೈಡ್‌ಫೀಲ್ಡ್ ಅರೇ (MWA) ಬಳಸಿ ವಸ್ತುವನ್ನು ಕಂಡುಹಿಡಿದಿದೆ. ರೇಡಿಯೋ ವೇವ್ ಬ್ಯಾರೇಜ್ ಪತ್ತೆಯಾಗಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ ಎಂದಿದ್ದಾರೆ.
ಪ್ರತಿ ವಸ್ತುವನ್ನು ನಾಡಿಮಿಡಿತಕ್ಕನುಗುಣವಾಗಿ GLEAM-X J162759.5-523504.3 ಎಂದು ಹೆಸರಿಸಲಾಗಿದೆ. ಈ ಶಕ್ತಿ ಸುಮಾರು 4 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂಬುದನ್ನು ಕಂಡಿಹಿಡಿದ್ದಾರೆ. ಈ ವಸ್ತುವು ದೊಡ್ಡ ಪ್ರಮಾಣದ ಶಕ್ತಿಯನ್ನು ಹೊರಸೂಸುವುದು ಬೆಳಕಿಗೆ ಬಂದಿದೆ. ಖಗೋಳಶಾಸ್ತ್ರಜ್ಞರಾದ ಹಾರ್ಲೆ-ವಾಕರ್ ಪ್ರಕಾರ, ಅದರಿಂದ ಹೊರಬಂದ ಪ್ರಕಾಶಮಾನವಾದ ಬೆಳಕು ತುಂಬಾ ತೀವ್ರವಾಗಿತ್ತು, ಒಮ್ಮೆಲೆ ಅಷ್ಟು ಪ್ರಕಾಶಮಾನವಾದ ಆಕಾಶ ವಸ್ತುವನ್ನು ಕಂಡುಹಿಡಿಯುವುದು ಕಷ್ಟ ಎಂತಲೂ ತಿಳಿಸಿದ್ದಾರೆ.
ಮರ್ಚಿಸನ್ ವೈಡ್‌ಫೀಲ್ಡ್ ಅರೇ ಟೆಲಿಸ್ಕೋಪ್‌ನಿಂದ ನಕ್ಷತ್ರಪುಂಜವನ್ನು ಕಂಡುಹಿಡಿಯಲಾಯಿತು. ನಕ್ಷತ್ರಾಕಾರದ ಕಕ್ಷೆಯಲ್ಲಿರುವ ಬಾಹ್ಯಾಕಾಶ ವಸ್ತುವನ್ನು ಮೊದಲು ಮಾರ್ಚ್ 2018 ರಲ್ಲಿ ಗುರುತಿಸಲಾಯಿತು. ಈ ನಕ್ಷತ್ರವು ಹೊರಸೂಸುವ ರೇಡಿಯೋ ಸಂಕೇತಗಳನ್ನು ಭೂಮಿಯಿಂದಲೂ ನೋಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ರಸ್ತೆಬದಿಯ ಲೈಟ್ ಹೌಸ್ ರೀತಿಯಲ್ಲಿ ಕಾಣುತ್ತದೆ ಎಂದಿದ್ದಾರೆ.