InternationalSports

ಏಳು ಸಿಕ್ಸರ್‌, 11 ಬೌಂಡರಿ; ವೇಗದ ಶತಕ ಸಿಡಿಸಿದ ಸೂರ್ಯಕುಮಾರ್‌

ವೆಲ್ಲಿಂಗ್ಟನ್; ಇತ್ತೀಚೆಗೆ ದಾಖಲೆಗಳ ಸರದಾರ ಎಂದೇ ಖ್ಯಾತರಾಗಿರುವ ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್‌ ಯಾದವ್‌ ಅವರು ಇಂದು ಮತ್ತೊಂದು ದಾಖಲೆ ಮಾಡಿದ್ದಾರೆ. ಭರ್ಜರಿಯ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಕಿವೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ  ತಂಡ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲೇ ಸೂರ್ಯ ಕುಮಾರ್‌ ಅಬ್ಬರಿಸಿದ್ದಾರೆ. ಕೇವಲ 49 ಎಸೆತಗಳಲ್ಲಿ  ಶತಕ ಸಿಡಿಸಿದ್ದಾರೆ. ಟಿ20ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದ್ದು, ರೋಹಿತ್ ಶರ್ಮಾ  ನಂತರ ಅತಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಭಾರತೀಯನೆಂಬ ಖ್ಯಾತಿ ಸೂರ್ಯಕುಮಾರ್‌ ಪಡೆದಿದ್ದಾರೆ.

51 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಅಜೇಯ 111 ರನ್ ಗಳಿಸಿ ದಾಖಲೆ ಬರೆದಿದ್ದಾರೆ. 7 ಸಿಕ್ಸರ್, 11 ಬೌಂಡರಿಗಳು ಇದರಲ್ಲಿ ಸೇರಿವೆ.

Share Post