ತಿರುಪತಿ; ಇತ್ತೀಚೆಗಷ್ಟೇ ಅವಳಿ ಮಕ್ಕಳ ನಾಮಕರಣ ಮಾಡಿದ್ದ ನಟಿ ಅಮೂಲ್ಯ ಇದೀಗ ಮಕ್ಕಳ ಮುಡಿ ಕೊಟ್ಟಿದ್ದಾರೆ. ತಿರುಪತಿಗೆ ಭೇಟಿ ನೀಡಿದ್ದ ಅಮೂಲ್ಯ ದಂಪತಿ, ತಮ್ಮಿಬ್ಬರ ಮಕ್ಕಳ ಮುಡಿಯನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.
ಮಕ್ಕಳ ಮುಡಿ ನೀಡುವ ಶಾಸ್ತ್ರಕ್ಕೆ ಅಮೂಲ್ಯ ಅವರ ಇಡೀ ಕುಟುಂಬ ತಿರುಪತಿಗೆ ಭೇಟಿ ನೀಡಿತ್ತು. ಇಬ್ಬರೂ ಮಕ್ಕಳ ಮುಡಿ ಕೊಟ್ಟು ಎಲ್ಲರೂ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ. ಮಕ್ಕಳ ಮುಡಿ ಕೊಟ್ಟ ಮೇಲೆ ತೆಗೆಸಿಕೊಂಡ ಫೋಟೋಗಳನ್ನು ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.