CrimeInternational

ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ಗಲಭೆ; ವಾಹನಗಳಿಗೆ ಬೆಂಕಿ, ಅಂಗಡಿಗಳ ಲೂಟಿ

ಡಬ್ಲಿನ್‌; ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ಮಕ್ಕಳು ಮತ್ತು ಇತರರನ್ನು ಇರಿಯಲಾಗಿದ್ದು, ಇದರಿಂದಾಗಿ ಲಗಭೆ ಏರ್ಪಟ್ಟಿದೆ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಚಾಕು ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಐದು ವರ್ಷದ ಬಾಲಕಿ ಹಾಗೂ 30 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದೆ. 40 ವರ್ಷದ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ನಗರ ಕೇಂದ್ರದ ಪಾರ್ನೆಲ್ ಸ್ಕ್ವೇರ್ ಈಸ್ಟ್ ಬಳಿಯ ಗೇಲ್‌ಸ್ಕೋಯಿಲ್ ಕೊಲೈಸ್ಟ್ ಮುಯಿರ್ ಶಾಲೆಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ಸಂಭವಿಸಿದೆ. ಆಪಾದಿತ ದಾಳಿಕೋರರು ಐರಿಶ್ ಪ್ರಜೆಯಾಗಿದ್ದು, 20 ವರ್ಷಗಳಿಂದ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ನಡೆದ ಸ್ಥಳದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಡಬೇಕಾಯಿತು.

ಓ’ಕಾನ್ನೆಲ್ ಸ್ಟ್ರೀಟ್ ಸೇರಿದಂತೆ ನಗರ ಕೇಂದ್ರದ ಹಲವಾರು ಬೀದಿಗಳಲ್ಲಿ ಗಲಭೆಗಳು ಭುಗಿಲೆದ್ದವು. ಪ್ರತಿಭಟನಾಕಾರರು ಕಾರು, ಟ್ರಾಮ್, ಬಸ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಓ’ಕಾನ್ನೆಲ್ ಸ್ಟ್ರೀಟ್‌ನಲ್ಲಿರುವ ಅಂಗಡಿಯನ್ನು ಲೂಟಿ ಮಾಡಲಾಗಿದೆ. ಹಲವು ಅಂಗಡಿಗಳ ಕಿಟಕಿಗಳು ಒಡೆದಿವೆ. ಗಾರ್ಡ ಸಹನಾ (ಐರಿಶ್ ಪೊಲೀಸ್ ಇಲಾಖೆ) ಮುಖ್ಯಸ್ಥ ಡ್ರೂ ಹ್ಯಾರಿಸ್, ಗಲಭೆಗಳಿಗೆ ಬಲಪಂಥೀಯ ಸಿದ್ಧಾಂತವನ್ನು ಹೊಂದಿರುವ ಗೂಂಡಾಗಿರಿಯನ್ನು ದೂಷಿಸಿದ್ದಾರೆ. ಪೊಲೀಸರು ಘಟನೆಯನ್ನು ಹತೋಟಿಗೆ ತಂದಾಗ ದಂಗೆ ಎದ್ದರು ಎಂದು ಹೇಳಿದ್ದಾರೆ.

 

Share Post