Sports

ನಾನು ಆಲ್‌ರೌಂಡರ್‌ ಆಗಿ ಆಡಲು ಬಯಸುತ್ತೇನೆ : ಹಾರ್ದಿಕ್‌ ಪಾಂಡ್ಯ

ನವದೆಹಲಿ : ಐಪಿಎಲ್‌ ಮೆಗಾ ಹರಾಜಿನಲ್ಲಿ ಹಾರ್ದಿಕ್‌ ಪಾಂಡ್ಯ ದೊಡ್ಡ ಮೊತ್ತಕ್ಕೆ ಬಿಕರಿ ಆಗ್ತಾರೆ ಎಂದು ಅಂದಾಜಿಸಲಾಗಿತ್ತು ಆದರೆ ಅಹಮದಾಬಾದ್‌ ತಂಡ ಅವರನ್ನು ಮೊದಲೇ ಖರೀದಿಸಿ ನಾಯಕರನ್ನಾಗಿ ಮಾಡಿದೆ. ಈಗ ಹಾರ್ದಿಕ್‌ ಪಾಂಡ್ಯ ಅವರ ಮೇಲಿನ ಜವಾಬ್ದಾರಿ ಹೆಚ್ಚಿದೆ.

ಈ ಕುರಿತು ಮಾತನಾಡಿರುವ ಹಾರ್ದಿಕ್‌ ಪಾಂಡ್ಯ ನಾನು ಬೌಲಿಂಗ್‌ ಮಾಡುವುದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ನನ್‌ ತಂಡಕ್ಕೆ ಇದರ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದೇನೆ. ಕೇವಲ ಬ್ಯಾಟರ್‌ ಆಗಿ ಆಡಲು ನಾನು ಇಚ್ಛಿಸುವುದಿಲ್ಲ. ನಾನು ಆಲ್‌ರಂಡರ್‌ ಆಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ನಾನು ಬ್ಯಾಟ್‌ ಅಂಡ್‌ ಬಾಲ್‌ ಇಂದ ಕಾಂಟ್ರಿಬ್ಯೂಟ್‌ ಮಾಡಲು ಬಯಸುವ ವ್ಯಕ್ತಿಯಾಗಿದ್ದೇನೆ. ನಾನು ಜವಾಬ್ದಾರಿ ಅರಿತು ಆಡುತ್ತೇನೆ. ನಾಯಕನಾಗಿ ನನ್ನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಎಲ್ಲವನ್ನು ನಿಭಾಯಿಸುವಷ್ಟು ಶಕ್ತನಾಗಿದ್ದೇನೆ ಎಂದು ಪಾಂಡ್ಯ ಹೇಳಿದ್ದಾರೆ.

ಪಾಂಡ್ಯ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಈಗ ಚೇತರಿಸಿಕೊಂಡಿದ್ದು ಪೂರ್ಣ ಪ್ರಮಾಣದ ಆಟ ಪ್ರದರ್ಶಿಸಲು ಸಜ್ಜಾಗಿದ್ದಾರೆ.

Share Post