Sports

ಟೆನಿಸ್‌ ಆಟಕ್ಕೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಟೆನಿಸ್‌ ಆಟಕ್ಕೆ ನನ್ನ ದೇಹ ಸಹಕರಿಸುತ್ತಿಲ್ಲ ಎಂದಿರುವ ಸಾನಿಯಾ ಮಿರ್ಜಾ, ಮೊಣಕಾಲಿನ ನೋವಿನಿಂದಾಗಿ ವೃತ್ತಿ ಬದುಕಿಗೆ ವಿದಾಯ ಹೇಳಲೇಬೇಕಾಗಿದೆ ಎಂದು ಹೇಳಿದ್ದಾರೆ.

ಸದ್ಯ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾರತದ ಪರವಾಗಿ ಆಡುತ್ತಿದ್ದಾರೆ. ಇದೇ ಅವರ ಕೊನೆಯ ಸೀಸಜ್‌ ಅಂತೆ.  ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ ಕುರಿತಾಗಿ ಸಾನಿಯಾ ಹೇಳಿದ್ದಾರೆ.

  ಕೆಲವು ವರ್ಷಗಳಿಂದ ಸಾನಿಯಾ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ 2013ರಲ್ಲಿ ಸಿಂಗಲ್ಸ್‌ ಆಡುವುದನ್ನು ನಿಲ್ಲಿಸಿದ್ದರು. ಡಬಲ್ಸ್‌ನಲ್ಲಿ ಮಾತ್ರ ಆಡುತ್ತಿದ್ದರು. ಇನ್ನು ಮೂರು ವರ್ಷಗಳ ಹಿಂದೆ ಮಗುವಿಗೆ ಜನ್ಮ ನೀಡಿದ ನಂತರ ಕಣಕ್ಕಿಳಿಯುವುದರಿಂದ ಕೊಂಚನೇ ದೂರವೇ ಇದ್ದರು.

Share Post