ಅನರ್ಹತೆ ನಂತರ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್!
ನವದೆಹಲಿ; ತೂಕ ಹೆಚ್ಚಿದ್ದರಿಂದ ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯ ಫೈನಲ್‌ನಿಂದ ಅನರ್ಹಗೊಂಡ ಭಾರತದ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ.. ನನ್ನ ವಿರುದ್ಧ ಕುಸ್ತಿಯೇ ಗೆದ್ದಿದೆ. ನಾನು ಸೋತಿದ್ದೇನೆ ಎಂದು ಹೇಳುತ್ತಾ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹಾಡಿದ್ದಾರೆ..
ಇದನ್ನೂ ಓದಿ; ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ; ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.. ಅಮ್ಮಾ.. ಕುಸ್ತಿಯೇ ನನ್ನ ವಿರುದ್ಧ ಗೆದ್ದಿದೆ. ನಾನು ಸೋತಿದ್ದೇನೆ ಎಂದು ಅವರು ಭಾವುಕವಾಗಿ ಬರೆದುಕೊಂಡಿದ್ದಾರೆ.. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದಿಂದ ಫೈನಲ್ ಪ್ರವೇಶಿಸಿದ ಮೊದಲ ಕುಸ್ತಿಪಟು ವಿನೇಶ್ ಫೋಗಟ್ ಎನಿಸಿಕೊಂಡಿದ್ದರು.. ಆದ್ರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆ ಅವರು ಫೇಲ್ ಆಗಿದ್ದರಿಂದ ಅನರ್ಹಗೊಂಡರು.. ಇದರಿಂದ ಅವರ ಚಿನ್ನದ ಪದಕ ಗೆಲ್ಲುವ ಕನಸು ನುಚ್ಚು ನೂರಾಗಿದೆ.
ಇದರಿಂದ ವಿಚಲಿತಗೊಂಡ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಘೋಷಿಸಿದ್ದಾರೆ..
ಇದನ್ನೂ ಓದಿ; 13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!