Sports

ಭಾರತದ ಗೆಲುವು ಬೌಲರ್‌ಗಳ ಕೈಯಲ್ಲಿ

ಕೇಪ್‌ಟೌನ್‌ : ಭಾರತ ಸೆಕೆಂಡ್‌ ಇನ್ನಿಂಗ್ಸ್‌  ಮೊದಲ ಇನ್ನಿಂಗ್ಸ್‌ಗಿಂತಲೂ ಕಳಪೆ ಆಗಿತ್ತು. ರಿಷಬ್‌ ಪಂತ್‌ ಅವರ ಶತಕ ಇಲ್ಲದಿದ್ದರೆ ಭಾರತಕ್ಕೆ ಬಹು ದೊಡ್ಡ ಕಂಟಕ ಎದುರಾಗುತಿತ್ತ. ರಿಷಬ್‌ ಅವರ ಶತಕದ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಸಿತು.  ಭಾರತವು ದ. ಆಫ್ರಿಕಾಗೆ ಪಂದ್ಯ ಗೆಲ್ಲಲು 212ರನ್‌ಗಳ ಟಾರ್ಗೆಟ್‌ ನೀಡಿದೆ.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ದ.ಆಫ್ರಿಕಾ ದಿನದಾಟದ ಅಂತ್ಯಕ್ಕೆ29.4 ಓವರ್‌ಗಳಲ್ಲಿ 101 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ದ.ಆಫ್ರಿಕಾಗೆ ಇನ್ನು ಕೇವಲ 111 ರನ್‌ಗಳ ಅವಶ್ಯಕತೆ ಇದೆ. ಇತ್ತ ಭಾರತಕ್ಕೆ  8 ವಿಕೆಟ್‌ಗಳ ಅವಶ್ಯಕತೆ ಇದೆ.

ರಿಷಬ್‌ ಪಂತ್‌ ಶತಕ, ವಿರಾಟ್‌ ಕೊಹ್ಲಿ ಅವರ 29ರನ್‌, ಕೆ ಎಲ್‌ ರಾಹುಲ್‌ 10ರನ್ ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನೂ ಕೂಡ ಒಂದಂಕಿ ಮೇಲೆ ದಾಟಿಲ್ಲ. ಇದು ಭಾರತಕ್ಕೆ ಬಹುದೊಡ್ಡ ಹಿನ್ನಡೆ ಆಗಿದೆ.

ಇನ್ನು ಎರಡು ದಿನಗಳ ಆಟ ಉಳಿದಿರುವ ಕಾರಣ ದ.ಆಫ್ರಿಕಾ ಸಮ ಚಿತ್ತದಿಂದ ಆಡಿದರೆ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಇನ್ನು ಭಾರತ ತಂಡ ಗೆಲ್ಲಬೇಕೆಂದರೆ ಭಾರತದ ಬೌಲರ್‌ಗಳು ಮ್ಯಾಜಿಕ್‌ ಮಾಡಬೇಕು ಅಷ್ಟೇ. ಪಂದ್ಯದ ಸ್ಥಿತಿ ನೋಡಿದರೆ ಡ್ರಾ ಎಂಬುದು ದೂರದ ಮಾತಾಗಿದೆ.

Share Post