ಬೌಲ್ಡಾದರೂ DRS ಮೊರೆ ಹೋದ ಅಶ್ವಿನ್
ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನ ಬ್ಯಾಟಿಂಗ್ ಮಾಡುತ್ತಿದ್ದ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅಜಾಜ್ ಪಟೇಲ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡಾದರೂ ಕೂಡ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್) ಮೊರೆ ಹೋಗಿ ಪೇಚಿಗೆ ಸಿಲುಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಟ್ರೋಲ್ ಆಗುತ್ತಿದ್ದಾರೆ.
ಬೌಲ್ಡ್ ಆಗಿ ಡಿಆರ್‌ಎಸ್ ಕೇಳಿದ ನಿದರ್ಶನಗಳಿರಲಿಲ್ಲ. ಇದೀಗ ಅದು ಕೂಡ ನಡೆದಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಶ್ವಿನ್ ಬ್ಯಾಟಿಂಗ್ ಬಂದಿದ್ದರು. ಅವರು ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್ ಆದರೂ ಆದರೆ ಇದನ್ನು ಗಮನಿಸದ ಅಶ್ವಿನ್ ತಮ್ಮ ಬ್ಯಾಟ್‍ಗೆ ತಾಗದೆ ಕೀಪರ್‌ಗೆ ಕ್ಯಾಚ್ ಆಗಿದೆ ಅಂದುಕೊಂಡು ಅಂಪೈರ್ ಔಟ್ ತೀರ್ಪು ನೀಡಿದ್ದಾರೆಂದು ಡಿಆರ್‌ಎಸ್ ಮೊರೆ ಹೋದರು. ಆ ಬಳಿಕ ಎಚ್ಚೆತ್ತುಕೊಂಡ ಅಶ್ವಿನ್ ಬೌಲ್ಡ್ ಆಗಿರುವುದನ್ನು ಗಮನಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು.