Sports

ಕೆಕೆಆರ್‌ ನಾಯಕನಾಗಿ ಶ್ರೇಯಸ್‌ ಅಯ್ಯರ್‌ ನೇಮಕ

ಬೆಂಗಳುರು : ಫೆ 12 ಮತ್ತು 13ರಂದು ನಡೆದ ಮೆಗಾ ಹರಾಜಿನಲ್ಲಿ ಕೆಕೆಆರ್‌ ತಂಡ ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿ ಮಾಡಿತ್ತು. 12.25 ಕೋಟಿ ಕೊಟ್ಟು ಶ್ರೇಯಸ್‌ ಅವರನ್ನು ಕೆಕೆಆರ್‌ ಖರೀದಿ ಮಾಡಿತ್ತು. ಮುಂಬರುವ ಐಪಿಎಲ್‌ 2022ಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ನಾಯಕನಾಗಿ ಕೆಕೆಆರ್‌ ತಂಡ ಘೋಷಿಸಿದೆ.

ಇನ್ನು ತಂಡದ ಕೋಚ್‌ ಆಗಿರುವ ಬ್ರೆಂಡನ್‌ ಮೆಕಲಮ್‌ ಕೂಡ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಶ್ರೇಯಸ್‌ ಅಯ್ಯರ್‌ ಮಾತನಾಡಿ ಕೆಕೆಆರ್‌ನಂತಹ ಪ್ರತಿಷ್ಠಿತ ತಂಡದ ನಾಯಕನಾಗಿ ಕೆಲಸ ಮಾಡುವುದು ನನಗೆ ಅತ್ಯಂತ ಗೌರವ ಎನಿಸಿದೆ. ಇನ್ನು ಈ ತಂಡವನ್ನು ನಾನು ಮುನ್ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ತಂಡ ಮುನ್ನಡೆಸಲು ಅವಕಾಶ ನೀಡಿದ ಕೆಕೆಆರ್‌ ಮಾಲೀಕರು, ನಿರ್ವಹಣೆಗಾರರು, ಮತ್ತು ಸಿಬ್ಬಂದಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

Share Post