Sports

ICC Test Ranking : ಕೆ.ಎಲ್.ರಾಹುಲ್‌, ಬುಮ್ರಾ, ಶಮಿಗೆ ಬಡ್ತಿ

ಐಸಿಸಿ ಕ್ರಿಕೆಟ್‌ ಮಂಡಳಿ ಬಿಡುಗಡ ಮಾಡಿರುವ ಟೆಸ್ಟ್‌ ರ್ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್‌ ಇಂಡಿಯದ ಕೆ.ಎಲ್‌ ರಾಹುಲ್‌ ಸೇರಿದಂತೆ ಬುಮ್ರಾ , ಶಮಿ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದಾರೆ. ನಾಯಕ ಕೆ.ಎಲ್‌ ರಾಹುಲ್‌ಗೆ ೧೮ ಸ್ಥಾನಗಳ ಬಡ್ತಿ ಸಿಕ್ಕಿದೆ. ಇದರಿಂದ ಅವರ ಈಗಿನ ಟೆಸ್ಟ್ ರ್ಯಾಂಕ್‌ 31‌ ಆಗಿದೆ.

ದ.ಆಫ್ರಿಕಾದ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೆ.ಎಲ್‌ ರಾಹುಲ್‌ ಅವರು ಪ್ರಗತಿ ಕಂಡಿದ್ದಾರೆ. ಇನ್ನು ವೇಗಿಗಳಾದ ಜಸ್ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ಅವರು 9 ಮತ್ತು 17ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ.

ಬೌಲಿಂಗ್‌ನ ಅಗ್ರ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್.‌ ಬ್ಯಾಟಿಂಗ್‌ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿರೋದು ಮಾರ್ನಸ್‌ ಲಾಬುಶೇನ್.‌ ಟೀಂ ಇಂಡಿಯಾದ ರೋಹಿತ್‌ ಶರ್ಮ ೫ನೇ ರ್ಯಾಂಕ್‌ ಪಡೆದಿದ್ದಾರೆ, ಹಾಗೆಯೇ ವಿರಾಟ್‌ ಕೊಹ್ಲಿ ಒಂಬತ್ತನೇ ರ್ಯಾಂಕ್‌ ಪಡೆದಿದ್ದಾರೆ.

Share Post