Sports

Ind vs Wi : ಭಾರತದ ನಾಲ್ಕು ಆಟಗಾರರಿಗೆ ಕೋವಿಡ್ ಸೋಂಕು

ನವದೆಹಲಿ : ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಸರಣಿಗೆ ಕೆಲ ದಿನಗಳು ಬಾಕಿ ಇರುವಾಗಲೇ ಭಾರತ ತಂಡದ ನಾಲ್ವರು ಆಟಗಾರರಿಗೆ ಕೋವಿಡ್‌ ದೃಢಪಟ್ಟಿದೆ.

ಕೋವಿಡ್‌ ದೃಢವಾಗಿರುವ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಋತುರಾಜ್‌ ಗಾಯಕ್‌ವಾಡ್‌ ಹಾಗೂ ಬೌಲರ್‌ ನವದೀಪ್‌ ಸೈನಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಈಗ ಪಾಸಿಟಿವ್‌ ಬಂದಿರುವ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಫೆ ೬ರಿಂದ ಏಕದಿನ ಸರಣಿ ಮತ್ತು ಫೆ ೧೬ರಿಂದ ಟಿ-20 ಸರಣಿ ನಡೆಯಲಿದೆ.

Share Post