Sports

83 ಚಿತ್ರದಲ್ಲಿ ರಣವೀರ್ ಕಾಣಲೇ ಇಲ್ಲ : Suniel Shetty

ಮುಂಬೈ : ಬಹು ನಿರೀಕ್ಷಿತ 83 ಸಿನಿಮಾ ತೆರೆಗೆ ಬರೋಕೆ ತಯಾರಾಗಿದೆ. ಚಿತ್ರತಂಡ ಸೆಲೆಬ್ರಿಟಿಗಳ ಪ್ರೀಮಿಯರ್‌ ಶೋ ಅರೇಂಜ್‌ ಮಾಡಿತ್ತು. ಸಿನಿಮಾ ನೋಡಿದ ಗಣ್ಯರೆಲ್ಲರೂ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕಪಿಲ್‌ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ ಗೆದ್ದಿತ್ತು. ಇದನ್ನು ಪರದೆ ಮೇಲೆ ನೋಡಿದ ಎಲ್ಲರೂ ರೋಮಾಂಚಿತರಾಗಿದ್ದಾರೆ.

ಸಿನಿಮಾ ನೋಡಿದ ಸುನೀಲ್‌ ಶೆಟ್ಟಿ ರಣವೀರ್‌ ಕಾಣಲೇ ಇಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಕೊಂಚ ಶಾಕಿಂಗ್‌ ಎನಿಸಬಹುದು ಆದರೆ ಅದರ ಒಳಾರ್ಥ ಬೇರೆ ಇದೆ. ಸುನೀಲ್‌ ಶೆಟ್ಟಿ ರಣವೀರ್‌ ಅವರನ್ನು ಹೊಗಳಲು ಈ ರೀತಿಯ ಪದ ಬಳಕೆ ಮಾಡಿದ್ದಾರೆ. ವಿಶಿಷ್ಟ ಬೌಲಿಂಗ್‌ ಮ್ಯಾನರಿಸಂ ಹೊಂದಿರುವ ಕಪಿಲ್‌ ಅವರನ್ನು ಅನುಕರಣೆ ಮಾಡೋದು ಅಷ್ಟು ಸುಲಭವಲ್ಲ. ಪರದೆ ಮೇಲೆ ನನಗೆ ಕಪಿಲ್‌ ಮಾತ್ರ ಕಾಣಿಸಿದ್ದಾರೆ ಹೊರತು ರಣವೀರ್‌ ಎಲ್ಲಿಯೂ ಕಾಣಿಸಿಲ್ಲ ಎಂದು ಹೇಳಿದ್ದಾರೆ. ಸುನೀಲ್‌ ಶೆಟ್ಟಿ ಅವರ ಟ್ವೀಟ್‌ ಹೀಗಿದೆ.

Share Post