ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ: ವಿಪಕ್ಷಗಳ ಗದ್ದಲ
ಬೆಳಗಾವಿ: ಸುವರ್ಣ ಸೌಧ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಧೇಯಕ ಮಂಡನೆ ಮಾಡಲಾಯಿತು. ತರಾತುರಿಯಲ್ಲಿ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ಕಲ್ಪಿಸಿಕೊಟ್ರು. ವಿಪಕ್ಷದ ಗಮನಕ್ಕೆ ಬರುವ ಮುನ್ನವೇ ವಿಧೇಯಕವನ್ನು ಸ್ಪೀಕರ್ ಓದಿ ಮುಗಿಸಿದ್ರು. ವಿಧೇಯಕ ಮಂಡನೆಯಾಗಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು. ಕಳ್ಳತನದಲ್ಲಿ ವಿಧೇಯಕವನ್ನು ಮಂಡನೆ ಮಾಡಿದ್ದಾರೆ, ಆರ್ಟಿಕಲ್ 25ರ ಉಲ್ಲಂಘನೆಯಾಗಿದೆ. ಪ್ರವಾಹ ಪರಿಹಾರದ ಬಗ್ಗೆ ಮಾತ್ರ ಉತ್ತರ ಕೊಟ್ಟಿಲ್ಲ ಆದ್ರೆ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತ್ರ ಯಾಕಿಷ್ಟು ಆತುರದ ನಿರ್ಧಾರ ಕದ್ದುಮುಚ್ಚಿ ಮಂಡನೆ ಮಾಡಿದ್ದು ಯಾಕೆ ಎಂದು ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.ಇನ್ನು ವಿಧೇಯಕ ಮಂಡನೆ ಆಗಿದ್ದಕ್ಕೆ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದರು.
ವಿಧೇಯಕದ ಪ್ರಕಾರ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಇನ್ನು ಮುಂದೆ ಅವಕಾಶವಿಲ್ಲ. ಒಂದು ವೇಳೆ ಮತಾಂತರಕ್ಕೆ ಪ್ರಯತ್ನ ಪಟ್ಟರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸ್ವತಃ ಇಚ್ಛೆಯಿಂದ ಮತಾಂತರವಾದರೆ ಸಮಸ್ಯೆಯಿಲ್ಲ ಆದ್ರೆ ಬಲವಂತದ ಮತಾಂತರವಾದರೆ ಮಾತ್ರ ಶಿಕ್ಷೆಗೆ ಒಳಪಡಬೇಕಾಗುತ್ತದೆ.