Sports

Ind vs Wi 2nd T20 : ಸರಣಿ ಗೆಲ್ಲುವತ್ತ ರೋಹಿತ್‌ ಬಳಗದ ಚಿತ್ತ

ಕೋಲ್ಕತ್ತ : ಈಡನ್‌ ಗಾರ್ಡನ್ಸ್‌ನಲ್ಲಿ ಇಂದು ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಎರಡನೇ T20 ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಇಂದ ಭಾರತ ಮುನ್ನಡೆ ಪಡೆದುಕೊಂಡಿದೆ. ಈಗ ಸರಣಿ ವಶಮಾಡಿಕೊಳ್ಳುವತ್ತ ರೋಹಿತ್‌ ಬಳಗ ಕಣ್ಣಿಟ್ಟಿದೆ.

ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಭಾರತ ಟಿ20 ಯನ್ನು ವೈಟ್‌ ವಾಶ್‌ ಮಾಡುವ ಯೋಜನೆಯಲ್ಲಿದೆ. ಈ ಬಾರಿಯ ಪ್ರವಾಸದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಒಂದೂ ಪಂದ್ಯವನ್ನು ಗೆದ್ದಿಲ್ಲ ಹಾಗಾಗಿ ಈ ಪಂದ್ಯ ವೆಸ್ಟ್‌ ಇಂಡೀಸ್‌ ತಂಡಕ್ಕೂ ಪ್ರತಿಷ್ಠೆಯ ಕಣವಾಗಿದೆ.

ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ತಕ್ಕ ಮಟ್ಟಕ್ಕೆ ಇರಲಿಲ್ಲ. ಇದರಿಂದ ಹಲವು ಆಟಗಾರರು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳದೆ ಇರಬಹುದು. ಇಂದು ರುತುರಾಜ್‌ ಗಾಯಕ್ವಾಡ್‌ ಅವರಿಗೆ ಅವಕಾಶ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ. ವಿರಾಟ್‌ ಕೊಹ್ಲಿ ಅವರ ಫಾರ್ಮ್‌ ಸಮಸ್ಯೆ ಇಲ್ಲಿಯೂ ಮುಂದುವರೆದಿದೆ.

ಇನ್ನು ದೀಪಕ್‌ ಚಹಾರ್‌ ಅವರು ಮೊದಲ ಪಂದ್ಯದಲ್ಲಿ ಗಾಯಾಳುವಾದ ಕಾರಣ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಪಂದ್ಯ ಇಂದು ಸಂಜೆ 7ಕ್ಕೆ ಪ್ರಾರಂಭವಾಗಲಿದೆ.

 

Share Post