ಕೋವಿಡ್ ಇಂದ ರಣಜಿ ಟೂರ್ನಿ ಮುಂದೂಡಿಕೆ
ಬೆಂಗಳೂರು : ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇದೇ ತಿಂಗಳು ಆರಂಭವಾಗಬೇಕಿದ್ದ ರಣಜಿ ಟ್ರೋಫಿಯನ್ನು ಮುಂದೂಡಲಾಗಿದೆ. ಕಳೆದ ವರ್ಷ ೨೦೨೦ರಲ್ಲಿ ಕೋವಿಡ್ ಹೆಚ್ಚಳದ ಕಾರಣದಿಂದಾಗಿ ರದ್ದು ಮಾಡಲಾಗಿತ್ತು.
ರಣಜಿ ಸೇರಿದಂತೆ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ, ಸೀನಿಯರ್ ಮಹಿಳೆಯರ ಟಿ 20 ಲೀಗ್ ಟೂರ್ನಿಗಳನ್ನು ಕೂಡ ಮುಂದೂಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಟಗಾರರು, ನೆರವು ಸಿಬ್ಬಂದಿ, ಅಧಿಕಾರಿಗಳು ಮತ್ತು ಇತರರ ಆರೋಗ್ಯ ಸುರಕ್ಷತೆಗೆ ನಾವು ಪ್ರಾಮುಖ್ಯತೆ ಕೊಡುತ್ತೇವೆ. ಆದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಮೂರು ಟೂರ್ನಿಗಳನ್ನು ರದ್ದು ಮಾಡಿದ್ದೇವೆ ಎಂದು ಜಯ್ ಶಾ ತಿಳಿಸಿದ್ದಾರೆ.
ಪ್ರಸಕ್ತ ದೇಶಿ ಕ್ರಿಕೆಟ್‌ನಲ್ಲಿ 11 ಟೂರ್ನಿಗಳಲ್ಲಿ 700ಕ್ಕೂ ಹೆಚ್ಚು ಪಂದ್ಯಗಳನ್ನು ನಡೆಸಲು ಸಿದ್ಧಮಾಡಿಕೊಂಡಿದ್ದೇವೆ ಎಂದು ಜಯ್ ಶಾ ತಿಳಿಸಿದ್ದಾರೆ.