ನಮ್ಮ ಮೆಟ್ರೋ – ಸ್ಟಾಂಡಿಂಗ್ ಪ್ರಯಾಣಕ್ಕೆ ನಿರ್ಬಂಧ
ಕೊರೊನಾ : ಮೂರನೆ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಘೋಷಿಸಿದೆ. ರಾಜ್ಯಾದ್ಯಂತ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಹೇರಿದ ಸರ್ಕಾರ ಸಂಚಾರ ನಿಗಮಗಳಿಗೆ ಸಂಬಂಧಿಸಿದಂತೆ ಆ ನಿಗಮಗಳ ಅಧಿಕಾರಿಗಳು ತಿಳಿಸುತ್ತಾರೆ ಎಂದು ಹೇಳಿದ್ದರು
ಈಗ ಮೆಟ್ರೊದಲ್ಲಿ ನಿಂತು ಸಂಚರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಆಸನಗಳು ಎಷ್ಟಿವೆಯೋ ಅಷ್ಟರಲ್ಲಿ ಕುಳಿತು ಪ್ರಯಾಣಿಸಬಹುದಾಗಿದೆಯೇ ಹೊರತು ನಿಂತು ಪ್ರಯಾಣಿಸಲು ಅವಕಾಶವಿಲ್ಲ. ಇನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಕಾರಣ ಮೆಟ್ರೋ ಕೂಡ ಸಂಚಾರ ಮಾಡುವುದಿಲ್ಲ.
ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾರ್ಗಸೂಚಿಯನ್ನು ಮೆಟ್ರೊ ಅಧಿಕಾರಿಗಳು ಇಂದು ಪ್ರಕಟಿಸಲಿದ್ದಾರೆ.