DistrictsPolitics

ಚನ್ನಪಟ್ಟಣಕ್ಕೆ ಯಾರು..?; ಟಿಕೆಟ್‌ ಯೋಗೇಶ್ವರ್‌ಗಾ..? ನಿಖಿಲ್‌ ಕುಮಾರಸ್ವಾಮಿಗಾ..?

ಬೆಂಗಳೂರು; ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.. ಇಲ್ಲಿ ದೋಸ್ತಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲ ಮಾತ್ರ ಜೋರಾಗಿದೆ.. ಒಂದು ಕಡೆ ಸಿ.ಪಿ.ಯೋಗೇಶ್ವರ್‌ ಟಿಕೆಟ್‌ ನನಗೇ ಬೇಕು.. ಕೊಡದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡ್ತೀನಿ ಅಂತಿದ್ದಾರೆ.. ಆದ್ರೆ, ಜೆಡಿಎಸ್‌ ಮಾತ್ರ ಇನ್ನೂ ತನ್ನ ಗುಟ್ಟು ಬಿಟ್ಟುಕೊಡುತ್ತಿಲ್ಲ.. ಜೆಡಿಎಸ್‌ ಪಕ್ಷ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.. ಬೆಳವಣಿಗೆಗಳೂ ಅದೇ ರೀತಿ ಇವೆ.. ಈ ನಡುವೆ ಬಿಜೆಪಿ ನಾಯಕರು ಸಿ.ಪಿ.ಯೋಗೇಶ್ವರ್‌ ಪರ ಬ್ಯಾಟ್‌ ಬೀಸೋಕೆ ಶುರು ಮಾಡಿದ್ದಾರೆ..

ಇದನ್ನೂ ಓದಿ; ದೇಶಕ್ಕೆ ಹೊಸ ಪ್ರಧಾನಿ ಬರ್ತಾರಾ..?; ಹೊಸ ಚರ್ಚೆ ಹುಟ್ಟುಹಾಕ್ತಿರೋದು ಯಾಕೆ..?

ಲೋಕಸಭಾ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್‌ ಅವರು ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದರು.. ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಗೆಲುವಿನಲ್ಲಿ ಪಾತ್ರ ವಹಿಸಿದ್ದರು.. ಈ ಕಾರಣಕ್ಕಾಗಿಯೇ ಅವರು ಈಗ ಉಪಚುನಾವಣೆಯಲ್ಲಿ ನನಗೇ ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದಾರೆ.. ಆದ್ರೆ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಈ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ.. ಹೀಗಿರುವಾಗಲೇ ಯೋಗೇಶ್ವರ್‌ ಅವರು ತನ್ನ ಬೆಂಬಲಿಗರ ಸಭೆ ಕರೆದು ಹೈಕಮಾಂಡ್‌ ಕರೆಯಿತು ಅಂತ ಅದನ್ನು ಕ್ಯಾನ್ಸಲ್‌ ಮಾಡಿದ್ದರು.. ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌ ಜೊತೆ ಮೊನ್ನೆ ವೇದಿಕೆ ಹಂಚಿಕೊಂಡಿದ್ದರು.. ಹೀಗಿರುವಾಗಲೇ ವಿಪಕ್ಷ ನಾಯಕ ಆರ್‌.ಅಶೋಕ್‌, ಯೋಗೇಶ್ವರ್‌ ಅವರಿಗೇ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.. ನಾನು ಹಾಗೂ ಅಶ್ವತ್ಥನಾರಾಯಣ್‌ ಅವರು ಸಿ.ಪಿ.ಯೋಗೇಶ್ವರ್‌ ಅವರನ್ನು ಭೇಟಿಯಾಗುತ್ತೇವೆ.. ಈಗಾಗಲೇ ಕುಮಾರಸ್ವಾಮಿಯವರ ಜೊತೆಗೂ ಮಾತನಾಡಿದ್ದೇವೆ.. ಶೀಘ್ರದಲ್ಲೇ ದೆಹಲಿಗೆ ಹೋಗಿ ಹೈಕಮಾಂಡ್‌ ಜೊತೆಗೂ ಮಾತನಾಡುತ್ತೇವೆ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ವೈದ್ಯನಿಗೆ ಹಿಗ್ಗಾಮುಗ್ಗಾ ಗೂಸಾ!

ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿರುವುದರಿಂದ ರಾಜ್ಯದಲ್ಲಿ ಪಕ್ಷ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ.. ಹೀಗಾಗಿ ನಿಖಿಲ್‌ ಕುಮಾರಸ್ವಾಮಿಯವರನ್ನು ರಾಜ್ಯದಲ್ಲಿ ಬೆಳೆಸಲು ಜೆಡಿಎಸ್‌ ತೀರ್ಮಾನ ಮಾಡಿದಂತೆ ಕಾಣುತ್ತಿದೆ.. ಹೀಗಾಗಿ, ನಿಖಿಲ್‌ಗೆ ಚನ್ನಪಟ್ಟಣದಲ್ಲಿ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬಂದರೆ ಅವರನ್ನು ದೊಡ್ಡ ನಾಯಕನಾಗಿ ಬೆಳೆಸಬಹುದು ಅನ್ನೋ ಲೆಕ್ಕಾಚಾರ ಇದ್ದಂತೆ ಕಾಣುತ್ತಿದೆ.. ಈಗಾಗಲೇ ಎರಡು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಸೋತಿರುವ ನಿಖಿಲ್‌ ಕುಮಾರಸ್ವಾಮಿಗೂ ಒಂದು ಗೆಲುವು ಬೇಕಿದೆ.. ಲೋಕಸಭಾ ಚುನಾವಣೆ ವೇಳೆ ಸದ್ಯಕ್ಕೆ ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳುತ್ತಿದ್ದರೂ, ಈ ಬಗ್ಗೆ ಜೆಡಿಎಸ್‌ನಲ್ಲಿ ಚರ್ಚೆಯಂತೂ ನಡೆದಿದೆ.. ಹೀಗಾಗಿ ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಎರಡೂ ಪಕ್ಷದಲ್ಲಿ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ ವಿಚಾರ; ಏಳು ಅಧಿಕಾರಿಗಳು ಸಸ್ಪೆಂಡ್‌

Share Post