Politics

ದಾಖಲೆ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ; ಕಲಬುರಗಿ ಜನಕ್ಕೆ ಮೋದಿ ಕರೆ

ಕಲಬುರಗಿ; ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿಯಿಂದ ಮತಬೇಟೆ ಶುರು ಮಾಡಿದರು. ರೋಡ್‌ ಶೋ ಮೂಲಕ ಮೈದಾನಕ್ಕೆ ಬಂದು ಮೋದಿಯವರು, ಭಾರೀ ಜನಸ್ತೋಮ ನೋಡಿ ಖುಷಿಪಟ್ಟರು. ಈ ಬಾರಿ ದಾಖಲೆ ಮಟ್ಟದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕಲಬುರಗಿ ಬಿಜೆಪಿ ಸಮಾವೇಶದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಕಲಬುರಗಿ ಜನತೆಗೆ ನಮಸ್ಕರಿಸಿದರು. ಇದೇ ವೇಳೆ ದಾಖಲೆಯ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಂಕಲ್ಪ ಮಾಡಿದ್ದಾಗಿ ಹೇಳಿದರು. ಅಲ್ಲದೆ, ನಾನು ಹೆಲಿಪ್ಯಾಡ್​ನಿಂದ ಬರುವಾಗ ರಸ್ತೆಯಲ್ಲಿ ಜನರ ಉತ್ಸಾಹ ನೋಡಿ ನನಗೆ ಬಹಳ ಸಂತಸವಾಯಿತು ಎಂದು ಹೇಳಿದರು.

ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪೇಠ ತೊಡಿಸಿದರು. ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಗೆ ಕಂಬಳಿ ಶಾಲು ಹಾಕಿದರು. ಭಗವಂತ ಖೂಬಾ ಮತ್ತು ಸಂಸದ ಉಮೇಶ್ ಜಾಧವ್ ಅವರು ಮೋದಿ ಅವರಿಗೆ ಹಾರ ಹಾಕಿ ಸನ್ಮಾನಿಸಿದರು. ಇದೇ ವೇಳೆ ಮಹಿಳೆಯರು ಬಸವಣ್ಣನ ಫೋಟೋ ನೀಡಿದರು.

Share Post