Politics

ಸಂಸದರಿಗೆ ಏನೆಲ್ಲಾ ಸವಲತ್ತು ಸಿಗುತ್ತದೆ..?; ಸಂಸದರ ಸಂಬಳ ಹಾಗೂ ಭತ್ಯೆಗಳೆಷ್ಟು..?

ನವದೆಹಲಿ; ಲೋಕಸಭಾ ಚುನಾವಣೆ ರಿಸಲ್ಟ್‌ ಬಂದಿದೆ.. 543 ಹೊಸ ಸಂಸದರು ಲೋಕಸಭೆ ಪ್ರವೇಶ ಮಾಡುತ್ತಿದ್ದಾರೆ.. ಮೋದಿ ನೇತೃತ್ವದ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತಿದೆ.. ಅಂದುಕೊಂಡಂತೆ ಆದರೆ ಇನ್ನು ಮೂರು ದಿನದಲ್ಲಿ ಮೋದಿ ಪ್ರಮಾಣವಚನ ಸ್ವೀಕಾರ ಮಾಡಬಹುದು.. ಅಂದಹಾಗೆ, ಜನರಿಂದ ಆಯ್ಕೆಯಾಗುವ ನಮ್ಮ ಸಂಸದರಿಗೆ ಏನೆಲ್ಲಾ ಸವಲತ್ತುಗಳು ಸಿಗುತ್ತವೆ..? ಅವರಿಗೆ ಎಷ್ಟು ಸಂಬಳ ಬರಬಹುದು..? ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.. ಹೀಗಾಗಿ ಆ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.. 

ಸಂಸದರ ಸಂಬಳ ಹಾಗೂ ಇನ್ನಿತರೆ ಸೌಲಭ್ಯಗಳೇನು..?

ಸಂಸದರಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳದ ರೂಪದಲ್ಲಿ ಸಿಗುತ್ತದೆ

ಸಂಸದರ ಮೂಲ ವೇತನ ತಿಂಗಳಿಗೆ 50 ಸಾವಿರ ರೂಪಾಯಿ ಆಗಿರುತ್ತದೆ

ಅಧಿವೇಶನಕ್ಕೆ ಹಾಜರಾದಾಗ ದಿನಕ್ಕೆ 2 ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತದೆ

ಸಂಸದರ ರಸ್ತೆ ಮೂಲಕ ಪ್ರಯಾಣಕ್ಕೆ ಕಿಲೋ ಮೀಟರ್‌ಗೆ 16 ರೂಪಾಯಿ ನೀಡಲಾಗುತ್ತದೆ

ಲೋಕಸಭಾ ಕ್ಷೇತ್ರದಲ್ಲಿ ಸುತ್ತಾಟಕ್ಕೆ ಪ್ರತಿ ತಿಂಗಳೂ 45 ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತದೆ

ಅಂಚೆ ವೆಚ್ಚಕ್ಕೆ 15 ಸಾವಿರ ರೂಪಾಯಿ ಹಾಗೂ ಕಚೇರಿ ವೆಚ್ಚಕ್ಕಾಗಿ ತಿಂಗಳಿಗೆ 45 ಸಾವಿರ ರೂಪಾಯಿ ನೀಡಲಾಗುತ್ತದೆ

ಸಂಸದರು ಸಭೆಗಳಿಗೆ ಹೋದರೆ ಅದಕ್ಕೆ ಆದ ಖರ್ಚುಗಳನ್ನು ಕೂಡಾ ನೀಡಲಾಗುತ್ತದೆ

ದೆಹಲಿಯಲ್ಲಿ ಸಂಸದರ ಅಧಿಕಾರಾವಧಿ ಮುಗಿಯುವವರೆಗೂ ಬಾಡಿಗೆ ರಹಿತವಾಗಿ ಒಂದು ಮನೆ ನೀಡಲಾಗುತ್ತದೆ

Share Post