ಏನಿದು ʻರಾಮನಗರʼ ಗುದ್ದಾಟ..?; ಹೆಸರು ಬದಲಿಸಿದರೆ ಅಭಿವೃದ್ಧಿ ಆಗುತ್ತಾ..?
ರಾಮನಗರ; ಲೋಕಸಭಾ ಚುನಾವಣೆಗೂ ಮೊದಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡುವ ಬಗ್ಗೆ ಮಾತನಾಡಿದ್ದರು.. ಈ ಚನ್ನಪಟ್ಟಣ ಉಪಚುನಾವಣೆ ರಾಜಕೀಯ ಜೋರಾಗುತ್ತಿದೆ.. ಇದರ ಬೆನ್ನಲ್ಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಿಸಲು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಲಾಗಿದೆ.. ಇದು ರಾಜಕೀಯ ಕಚ್ಚಾಟಕ್ಕೆ ಕಾರಣವಾಗುತ್ತದೆ..
ಇದನ್ನೂ ಓದಿ;ಸತೀಶ್ ಜಾರಕಿಹೊಳಿ-ಹೆಚ್ಡಿಕೆ ರಹಸ್ಯ ಭೇಟಿ; ದೆಹಲಿಯಲ್ಲಿ ಆ 1 ಗಂಟೆ ಮೀಟಿಂಗ್ ರಹಸ್ಯವೇನು..?
2006ರಲ್ಲಿ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಲಾಗಿತ್ತು.. ಜಿಲ್ಲೆಯಾದ ಮೇಲೆ ಹಲವು ಅಭಿವೃದ್ಧಿ ಕೆಲಸಗಳೂ ನಡೆದಿದ್ದವು.. ಆದ್ರೆ ಡಿ.ಕೆ.ಶಿವಕುಮಾರ್ ಅವರ ಲೆಕ್ಕಾಚಾರವೇ ಬೇರೆ ಇದೆ.. ಈ ಭಾಗಗಳು ಬೆಂಗಳೂರು ನಗರಕ್ಕೆ ಸೇರಿದರೆ ಇಲ್ಲಿನ ರಿಯಲ್ ಎಸ್ಟೇಟ್ ಬೂಮ್ ಆಗುತ್ತದೆ.. ಭೂಮಿಯ ಬೆಲೆಗಳು ದುಪ್ಪಟ್ಟಾಗುತ್ತವೆ ಎಂದು ಲೆಕ್ಕಾಚಾರ ಹಾಕಿದ್ದಾರೆ.. ಈ ಬಗ್ಗೆ ಹಲವು ಬಾರಿ ಮಾತನಾಡಿ ಜನರಲ್ಲಿ ಆಸಕ್ತಿ ಹುಟ್ಟಿಸಿದ್ದಾರೆ..
ಇನ್ನು ಇದೀಗ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಬಂದಿದೆ.. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸೋತಿದ್ದರಿಂದ ಅದರ ಸೇಡು ತೀರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಿಸೋದಕ್ಕಾಗಿ ಈಗಿನಿಂದಲೇ ಕಸರತ್ತು ಮಾಡುತ್ತಿದ್ದಾರೆ.. ಇದರ ಬೆನ್ನಲ್ಲೇ ಜಿಲ್ಲೆ ಬದಲಾವಣೆ ವಿಚಾರ ಮುನ್ನೆಲೆಗೆ ತಂದಿದ್ದಾರೆ.. ಇದರ ಮೂಲಕ ವೋಟು ಗಿಟ್ಟಿಸಬಹುದು ಅನ್ನೋ ಲೆಕ್ಕಾಚಾರ ಕೂಡಾ ಇದ್ದಂತಿದೆ..
ಇದನ್ನೂ ಓದಿ; ತುಪ್ಪದ ಅಸಲೀತನದ ಪರೀಕ್ಷೆ ಮಾಡುವುದು ಹೇಗೆ..?
ಅಂದಹಾಗೆ, ರಾಮನಗರದಲ್ಲಿ ರಾಮದೇವರ ಬೆಟ್ಟ ಇದೆ.. ಹೀಗಾಗಿಯೇ ಆ ನಗರಕ್ಕೆ ರಾಮನಗರ ಎಂದು ಹೆಸರು ಬಂದಿದೆ.. ಹೀಗಾಗಿ ಹೆಸರು ಬದಲಾಯಿಸುತ್ತಿರುವುದಕ್ಕೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮುಂದಾಗಿವೆ..
ಹೀಗಿರುವಾಗಲೇ, ಚರ್ಚೆ ಮಾಡಬೇಕಾದ ವಿಚಾರ ಏನು ಅಂದ್ರೆ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಸೇರಿ ಹಲವು ಘಟಾನುಘಟಿ ನಾಯಕರು ರಾಜಕೀಯ ಮಾಡಿದ್ದಾರೆ.. ಅಧಿಕಾರ ಅನುಭವಿಸಿದ್ದಾರೆ.. ಆಗ ಮಾಡಲಾಗದ ಅಭಿವೃದ್ಧಿ, ರಾಮನಗರವನ್ನು ಬೆಂಗಳೂರಿಗೆ ಸೇರಿಸಿದರೆ ಆಗುತ್ತಾ ಅನ್ನೋ ಪ್ರಶ್ನೆ ಮೂಡುತ್ತದೆ.. ಇನ್ನು ಇದರ ಜೊತೆಗೆ ಬೆಂಗಳೂರು ನಗರದಲ್ಲೇ ಎಷ್ಟೋ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ.. ಹೀಗಿರುವಾಗ ಇನ್ನೂ ಒಂದಷ್ಟು ಪ್ರದೇಶಗಳು ಸೇರ್ಪಡೆಯಾದರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಏಳುತ್ತದೆ..
ಇದನ್ನೂ ಓದಿ; ಬಯಲು ಶೌಚಕ್ಕೆ ಕೂತಿದ್ದ ವೃದ್ಧನ ಮರ್ಮಾಂಗ ಕಚ್ಚಿಕೊಂಡುಹೋದ ಮೊಸಳೆ!
ಹೆಸರು ಬದಲಾವಣೆ ಮಾಡಿದರೆ ಮತ್ತೆ ದಾಖಲೆಗಳು ಬದಲಾಗುತ್ತದೆ.. ರಾಮನಗರ ಎಂದಿರುವ ಕಡೆಯೆಲ್ಲಾ ಬೆಂಗಳೂರು ದಕ್ಷಿಣ ಎಂದು ಬದಲಾಯಿಸಬೇಕಾಗುತ್ತದೆ.. ಇದು ಕೂಡಾ ದೊಡ್ಡ ತಲೆನೋವಿನ ಪ್ರಶ್ನೆಯಾಗುತ್ತದೆ.. ಹೀಗಿದ್ದರೂ ಕೂಡಾ ಈ ಬಗ್ಗೆ ರಾಜಕೀಯ ಕೆಸರೆರಚಾಟಗಳು ಜೋರಾಗಿ ನಡೆಯುತ್ತಿವೆ..